2018 ರಲ್ಲಿ ನಟ ಅರ್ಜುನ್ ಸರ್ಜಾ ವಿರುದ್ದ ಮಾಡಲಾಗಿದ್ದ ಮೀ ಟೂ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಸಿಗದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಹಾಕಿ ಪ್ರಕರಣಕ್ಕೆ ಮುಕ್ತಿ ಹಾಡಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಕಬ್ಬನ್ ಪೇಟೆ ಪೋಲೀಸರು ಈ ಕುರಿತಂತೆ ನಟಿ ಶ್ರುತಿ ಹರಿಹರನ್ ಗೆ ನೋಟೀಸ್ ನೀಡಿದ್ದಾರೆ.
ಸಿಆರ್ ಪಿಸಿ. 159 ಕಲಂ ಅಡಿ ನಟಿ ಶ್ರುತಿ ಹರಿಹರನ್ ಗೆ ನೋಟೀಸ್ ನೀಡಿ ಮೀ ಟೂ ಪ್ರಕರಣಕ್ಕೆ ಮೂರು ವರ್ಷಗಳು ಕಳೆದರೂ ಯಾವೂದೇ ಸೂಕ್ತ ಸಾಕ್ಷ್ಯಾಧಾರಗಳು ದೊರೆತಿಲ್ಲ. ಹೀಗಾಗಿ ಈ ಸಂಗತಿಯನ್ನು ನಟಿ ಶ್ರುತಿಗೆ ತಿಳಿಸುವ ಸಲುವಾಗಿ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ಸರ್ಜಾ ವಿರುದ್ದ ಲೈಂಗಿಕ ಆರೋಪದ ದೂರು ನೀಡಿದ್ದ ಶೃತಿ ಹರಿಹರನ್ ಮೂರು ದಿನದೊಳಗೆ ಠಾಣೆಗೆ ಹಾಜರಾಗುವಂತೆ ನೋಟೀಸ್ ನಲ್ಲಿ ತಿಳಿಸಿದ್ದಾರೆ.
ಶೃತಿ ಗಮನಕ್ಕೆ ತನಿಖೆ ಕ್ರಮಗಳು ಹಾಗೂ ಲಭ್ಯವಿಲ್ಲದ ಸಾಕ್ಷ್ಯಗಳ ಬಗ್ಗೆ ಮಾಹಿತಿ ನೀಡಿ ನಂತರ ಪೋಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್