ಬೆಂಗಳೂರಿನಲ್ಲಿ ಬುಧವಾರ ಏಳು ಕಡೆಗಳಲ್ಲಿ ಎಸಿಬಿ ದಾಳಿಯಲ್ಲಿ ನಡೆಸಿದೆ ಬಿಬಿಎಂಪಿ ರಸ್ತೆ ಸೌಕರ್ಯ ಹಾಗೂ ಮೂಲ ಸೌಕರ್ಯ ವಿಭಾಗ ಎಫ್.ಡಿ.ಎ. ಆಗಿರುವ ಮಾಯಣ್ಣನ ಕತ್ರಿಗುಪ್ಪೆ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಾಯಣ್ಣ ಆಪ್ತೆ ಉಮಾದೇವಿ ಅವರ ನಂದಿನಿ ಲೇಔಟ್ ಮನೆ ಮೇಲೂ ರೇಡ್ ಮಾಡಲಾಗಿದೆ.
ಸಕಾಲ ಆಡಳಿತಾಧಿಕಾರಿ ಎಲ್.ಸಿ.ನಾಗರಾಜ್ ನೆಲಮಂಗಲ ನಿವಾಸ ಹಾಗೂ ಯಲಹಂಕ ಸರ್ಕಾರಿ ಆಸ್ಪತ್ರೆ ವೈದ್ಯ ಫಿಜಿಯೋಥೆರಪಿಸ್ಟ್ ರಾಜಶೇಖರ್ ನಿವಾಸ, ಯಶವಂತಪುರ ಬಿಬಿಎಂಪಿ ಡಿ ಗ್ರೂಪ್ ನೌಕರ ಜಿ.ವಿ.ಗಿರಿ, ನಂದಿನಿ ಡೈರಿ ಜನರಲ್ ಮ್ಯಾನೇಜರ್ ಕೃಷ್ಣಾರೆಡ್ಡಿ ಹಾಗೂ ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರದ ವಾಸುದೇವ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ಡಿವೈಎಸ್ಪಿ ರವಿಶಂಕರ್, ಇನ್ಸ್ಪೆಕ್ಟರ್ ಮಂಜುನಾಥ ನೇತೃತ್ವದಲ್ಲಿ ಮಾಯಣ್ಣ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ದೊರೆತಿದೆ. ಇವುಗಳನ್ನು ಮೌಲ್ಯಮಾಪನ ಮಾಡಲು ಮಾಯಣ್ಣ ನಿವಾಸಕ್ಕೆ ಎಸಿಬಿ ಅಧಿಕಾರಿಗಳು ಅಕ್ಕಸಾಲಿಗರನ್ನು ಕರೆತಂದಿದ್ದಾರೆ.
ಮಾಯಣ್ಣ ಕಳೆದ ಏಳು ವರ್ಷಗಳಿಂದ ಬಿಬಿಎಂಪಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಬಿಬಿಎಂಪಿಯ ರಸ್ತೆ ಅಭಿವೃದ್ಧಿ ಮೂಲ ಸೌಕರ್ಯ ವಿಭಾಗದಲ್ಲಿ ಎಫ್.ಡಿ.ಎ ಆಗಿದ್ದರು.
ರಸ್ತೆ ಅಭಿವೃದ್ದಿಗೆ ಸಂಬಂಧಪಟ್ಟ ಟೆಂಡರ್ ಗಳಲ್ಲಿ ಭಾಗಿ ಆಗಿ ಕಮಿಷನ್ ಪಡೆದಿರುವ ಆರೋಪ ಮಾಯಣ್ಣ ಮೇಲಿದೆ ನಕಲಿ ದಾಖಲೆ ಸೃಷ್ಟಿಸಿ ರಸ್ತೆ ಟೆಂಡರ್ ಪಡೆದಿರೋ ಆರೋಪ ಕೇಳಿ ಬಂದಿದೆ.
- ತಿರುಪತಿ ದೇವಾಲಯದಲ್ಲಿ ಬೆಂಕಿ ಅವಘಡ: ಲಡ್ಡು ವಿತರಣಾ ಕೌಂಟರ್ನಲ್ಲಿ ಶಾರ್ಟ್ ಸರ್ಕ್ಯೂಟ್
- ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಶ್ಚಿತ
- ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದವರಿಗೆ ₹25,000 ಬಹುಮಾನ: ಕೇಂದ್ರ ಸರ್ಕಾರ
- ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ
- ಪಾಸ್ಪೋರ್ಟ್ ಸೇವೆ ವಿಸ್ತರಣೆ: ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ
More Stories
ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಶ್ಚಿತ
ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದವರಿಗೆ ₹25,000 ಬಹುಮಾನ: ಕೇಂದ್ರ ಸರ್ಕಾರ
ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ