ರಾಜ್ಯದಲ್ಲಿನ ನೆರೆ ಸಂತ್ರಸ್ಥರಿಗೆ ಹಾಗೂ ಮನೆ, ಬೆಳೆ ಹಾನಿಯಾದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ.
ಮಳೆ ಹಾನಿ ಪರಿಹಾರವಾಗಿ 418 ಕೋಟಿ 72 ಲಕ್ಷದ 91 ಸಾವಿರ ರು ಘೋಷಿಸಿ ಸಿಎಂ ಅಧೀಕೃತ ಆದೇಶ ಹೊರಡಿಸಿದ್ದಾರೆ.
ತುರ್ತು ಪರಿಹಾರದ ಬಳಕೆಗಾಗಿ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ನಿಧಿಯಿಂದ ಈ ಪರಿಹಾರ ಬಿಡುಗಡೆ ಮಾಡಲಾಗಿದೆ
ಜಿಲ್ಲಾಧಿಕಾರಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ನೆರೆ ಸಂತ್ರಸ್ಥರಿಗೆ ಮತ್ತು ಮನೆ ಹಾನಿಗಳಿಗೆ ತುರ್ತು ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ ಅಲ್ಲಿ ಅಕಾಲಿಕ ಮಳೆಯಿಂದಾಗಿ ಉಂಟಾದ ಹಾನಿ ಕುರಿತು ಚರ್ಚೆ ನಡೆಸಲಿದ್ದಾರೆಂದು ಹೇಳಲಾಗಿದೆ.
ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಕಾಲಿಕ ಮಳೆಯ ಜೊತೆಗೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.
- ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ
- ಪಾಸ್ಪೋರ್ಟ್ ಸೇವೆ ವಿಸ್ತರಣೆ: ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ
- ಹಣ ಡಬ್ಲಿಂಗ್ ಹೆಸರಲ್ಲಿ 2 ಕೋಟಿ ರೂಪಾಯಿ ವಂಚನೆ: 7 ಮಂದಿ ಬಂಧನ
- ಹಸುಗಳ ಕೆಚ್ಚಲು ಕೊಯ್ದಆರೋಪಿ ಬಂಧನ : ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ
- ದುಬೈ ಕಾರ್ ರೇಸ್ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಸಾಧನೆ
More Stories
ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ
ಹಣ ಡಬ್ಲಿಂಗ್ ಹೆಸರಲ್ಲಿ 2 ಕೋಟಿ ರೂಪಾಯಿ ವಂಚನೆ: 7 ಮಂದಿ ಬಂಧನ
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ