ರಂಗೇರಿದ ಮಂಡ್ಯ ಎಂಎಲ್ಸಿ ಚುನಾವಣೆಯಲ್ಲಿ ಸಂಸದೆ ಸುಮಲತಾ ಬೆಂಬಲ ಯಾರಿಗೆ ಸಿಗಲಿದೆ ಎಂಬುದೇ ಚರ್ಚೆ ವಿಷಯವಾಗಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಗೆ ಮಾತ್ರ ಸುಮಲತಾ ಬೆಂಬಲ ಸಿಗುವುದಿಲ್ಲ ಎಂಬುದು ತೆರೆದಿಟ್ಟ ಸತ್ಯ.
ಬಿಜೆಪಿ- ಕಾಂಗ್ರೆಸ್ ಅಭ್ಯಥಿ೯ಗಳು ಹಾಗೂ ಆಯಾ ಪಕ್ಷಗಳು ಸುಮಲತಾರ ಬೆಂಬಲಕ್ಕೆ ಕಾದು ಕುಳಿತಿವೆ.
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಅಂತಿಮ ದಿನವಾದ ಇಂದು ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈಗ ಚುನಾವಣಾ ಕಣ ರಂಗೇರಿದೆ, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ನಾಯಕರು ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಮಂಡ್ಯ ಸಂಸದೆ ಸುಮಲತಾ ಅವರು ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬ ಚರ್ಚೆ ವಸ್ತುವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಅಲ್ಲದೇ ಮೈಸೂರಿನಲ್ಲಿ ನಡೆದ ಪ್ರಚಾರದ ಸಮಾವೇಶದಲ್ಲಿ ಸುಮಲತಾ ಗೆಲ್ಲಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮನವಿ ಮಾಡಿದ್ದರು.
ಅತ್ತ ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರ್ ಸ್ವಾಮಿ ಬದಲು ಸುಮಲತಾರನ್ನು ಬಹುತೇಕ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದರು.
ನೇರವಾಗಿ ಬೆಂಬಲ ಸೂಚಿಸದಿದ್ದರೂ ಕೂಡ ಸುಮಲತಾ ಗೆಲುವಿಗೆ ತಂತ್ರ ಎಣೆದಿದ್ದ ಕಾಂಗ್ರೆಸ್ ನಾಯಕರು ಗೆಲುವಿಗೆ ಶ್ರಮಿಸಿದ್ರು. ಈ ಹಿನ್ನೆಲೆಯಲ್ಲಿ ಸದ್ಯ ಸುಮಲತಾ ಅವರು ಇಕ್ಕಟ್ಟಿ ಗೆ ಸಿಲುಕಿದ್ದು, ಬಿಜೆಪಿಗೆ ಬೆಂಬಲ ಕೊಡೋದಾ, ಕಾಂಗ್ರೆಸ್ಗೆ ಬೆಂಬಲ ಕೊಡೋದಾ ಎಂಬ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ಈ ನಡುವೆ ಸುಮಲತಾ ಅವರ ಬಹುತೇಕ ಬೆಂಬಲಿಗರು ತಟಸ್ಥವಾಗಿರಲು ನಿರ್ಧರಿಸುವ ಸಾಧ್ಯತೆ ಇದೇ ಎಂದಿದ್ದಾರೆ.
ನಮಗೆ ಬೆಂಬಲ – ಬಿಜೆಪಿ ಅಭ್ಯರ್ಥಿ
ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮಗೇ ಸುಮಲತಾ ಅವರು ಬೆಂಬಲ ನೀಡಬೇಕು. ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಸುಮಲತಾ ಅವರ ಚುನಾವಣೆಯಲ್ಲಿ ನಾವು ಅವರ ಪರ ಕೆಲಸ ಮಾಡಿದ್ದೀವಿ. ಅವರ ಗೆಲುವು ನಮ್ಮ ಗೆಲುವು ಅಂತ ಸಂಭ್ರಮಿಸಿದ್ದೇವೆ. ಸುಮಲತಾ ನಮಗೆ ಬೆಂಬಲ ನೀಡಲಿದ್ದಾರೆ. ಈಗಾಗಲೇ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮುಂದೆ ಖುದ್ದಾಗಿ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸುಮಲತಾ ಬೆಂಬಲ ನೀಡುವ ವಿಶ್ವಾಸ ಇದೆ ಎಂದರು.
ಇದೇ ವೇಳೆ ಬಿಜೆಪಿ ಋಣ ತೀರಿಸಲು ಸುಮಲತಾ ಅವರಿಗೆ ಒಳ್ಳೆಯ ಅವಕಾಶ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹೇಳಿದರು.
- ಪೆಟ್ರೋಲ್ GST ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸ್ಪಷ್ಟನೆ
- ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
- ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ
- 12 ರಾಶಿಗಳ 2025ರ ವಾರ್ಷಿಕ ಭವಿಷ್ಯ
- ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಹಾವು ಕಚ್ಚಿ ದಾರುಣ ಸಾವು
More Stories
ಪೆಟ್ರೋಲ್ GST ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸ್ಪಷ್ಟನೆ
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ