ಮಂಡ್ಯದಲ್ಲಿ ನಡೆದ ವಿಶಿಷ್ಠ್ಯ ಕಾರ್ಯಕ್ರಮ : ವಿವಾಹ ಮಹೋತ್ಸವದಲ್ಲೇ ಕನ್ನಡದ ಎರಡು ಕೃತಿಗಳು ಬಿಡುಗಡೆ

Team Newsnap
1 Min Read

ಇದೊಂದು ಅಪರೂಪದ ಕಾರ್ಯಕ್ರಮ. ಕಲ್ಯಾಣ ಮಂಟಪದಲ್ಲಿ ಮಂಗಳ ವಾದ್ಯಗಳು ಮೊಳಗುತ್ತಿರುವ ವೇಳೆ ಸಿಂಗಾರಗೊಂಡ ನೂತನ ವಧು – ವರರ ಸಾಕ್ಷಿಯಾಗಿ ವಧುವಿನ ತಂದೆ, ಸಾಹಿತಿ ತ ನಾ ಶಿ ಹಾಗೂ ಹಿರಿಯ ಸಾಹಿತಿ ಬೆಂಗಳೂರಿನ ಜೆ. ಎನ್ . ಜಗನ್ನಾಥ್ ಬರೆದಿರುವ ಕವಿ ಕೃತಿ ಪರಿಚಯದ ಧ್ರುವ ತಾರೆಗಳು ಎಂಬ ಕೃತಿಯನ್ನು ಲೋಕಾಪ೯ಣೆ ಮಾಡಲಾಯಿತು.

druva tare

ಮಂಡ್ಯದ ಬಂಧೀಗೌಡ ಬಡಾವಣೆಯಲ್ಲಿರುವ ಗಾಯತ್ರಿ ಸಮುದಾಯ ಭವನದಲ್ಲಿ ತಾಲೂಕಿನ‌ ತಡಗವಾಡಿ ಮನೆತನದ ತ‌ಡಗವಾಡಿ ನಾರಾಯಣರಾವ್ ಶಿವಕುಮಾರ್ ಹಾಗೂ ಶ್ರೀಮತಿ ಚಂದ್ರಿಕಾ ಇವರ ಮಗಳು ವಿನುತಾ ಹಾಗೂ ಸಂತೋಷ್ ಇವರ ವಿವಾಹೋತ್ಸವದಲ್ಲಿ ಸಾಹಿತ್ಯ ಸಂಭ್ರಮವೂ ವಿಶಿಷ್ಠವಾಗಿ ಜರುಗಿತು.

ಬೆಳಗಾವಿಯ ನ್ಯಾಯಾಲಯದಲ್ಲಿ ಆಡಳಿತಾಧಿಕಾರಿಯಾಗಿರುವ ವಧುವಿನ ತಂದೆ, ಸಾಹಿತಿ ತನಾಶಿ ಎಂಬ ಕಾವ್ಯನಾಮ ಖ್ಯಾತರಾದ ತ.ನಾ.ಶಿವಕುಮಾರ್ ಅವರು ರಚಿಸಿದ ಕನಕದಾಸರ ಹರಿಭಕ್ತಿಸಾರದ ವ್ಯಾಖ್ಯಾನಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.

ಕನಕದಾಸ ಜಯಂತಿಯಂದು ‘ರಕ್ಷಿಸು ನಮ್ಮನನವರತ’ ಸಂದೇಶದ ಹರಿಭಕ್ತಿಸಾರ ಗ್ರಂಥವನ್ನು ತನಾಶಿ ಅವರು ಲೋಕಾರ್ಪಣೆ ಮಾಡಿ ವಧು ಮತ್ತು ವರನಿಗೆ ಕನಕ ಸಂದೇಶ ನೀಡಿ ಹರಸಿದರು.

ಹಿರಿಯ ಲೇಖಕ ಬೆಂಗಳೂರಿನ ಜೆ. ಎನ್ . ಜಗನ್ನಾಥ್ ಅವರು ರಚಿಸಿದ ‘ಧ್ರುವತಾರೆಗಳು’ ಹೆಸರಿನ ಕವಿ ಕೃತಿ ಪರಿಚಯದ ಕೃತಿಯನ್ನು ಲೇಖಕ ಕೊಕ್ಕಡ ವೆಂಕಟ್ರಮಣ ಭಟ್ ಬಿಡುಗಡೆ ಮಾಡಿದರು.

ರಮಾಕಾಂತ ಶೆಣೈ ಅವರು ರಚಿಸಿದ ವಿಷ್ಣು ಸಹಸ್ರನಾಮ ಅರ್ಥವಿವರಣೆ ಗ್ರಂಥವನ್ನು ಧಾರವಾಡದ ದತ್ತಾತ್ರೇಯ ಕುಲಕಣಿ೯ ಲೋಕಾಪ೯ಣೆ ಮಾಡಿದರು.

ಸುನೀಲ್ ಹಳೆಯೂರು ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿವಿಜಿ ಬಳಗದ ೨೫ ಸದಸ್ಯರು ಉಪಸ್ಥಿತರಿದ್ದು ಪುಸ್ತಕ ಲೋಕಾರ್ಪಣೆಗೆ ಸಹಕರಿಸಿದರು. ಹಿರಿಯ ಪತ್ರಕರ್ತ ಕೆ ಎನ್ ರವಿ ಉಪಸ್ಥಿತರಿದ್ದರು.

Share This Article
Leave a comment