February 21, 2026

Newsnap Kannada

The World at your finger tips!

college drag

ಮಂಗಳೂರಿನ ಪ್ರತಿಷ್ಠಿತ ಕಾಲೇಜು :ಡ್ರಗ್ಸ್ ಸೇವನೆ ಮಾಡಿದ ಐವರು ವಿದ್ಯಾರ್ಥಿಗಳ ಬಂಧನ

Spread the love

ಮಂಗಳೂರಿನಲ್ಲಿ ಮತ್ತೆ ಡ್ರಗ್ಸ್​ ಜಾಲ ಸಕ್ರೀಯವಾಗಿದೆ ಪ್ರತಿಷ್ಠಿತ ಕಾಲೇಜಿನ 5 ವಿದ್ಯಾರ್ಥಿಗಳನ್ನು ಮಂಗಳೂರಿನ ಪೋಲಿಸರು ಕಳೆದ ರಾತ್ರಿ ಬಂಧಿಸಿದ್ದಾರೆ

ಕೊರೊನಾ ಸಂಕಷ್ಟ ಬಳಿಕ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡಲಾಗುತ್ತಿದೆ.

ನಿನ್ನೆ ರಾತ್ರಿ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ 5 ಮಂದಿ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳು ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ನಿನ್ನೆ ತಡ ರಾತ್ರಿ ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಡ್ರಗ್ಸ್ ಮಾಫಿಯಾ ಜಾಲ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದೆ ಎನ್ನಲಾಗಿದ್ದು, ಸದ್ಯ ವಿದ್ಯಾರ್ಥಿಗಳು ಬಂಧನ ಆದ ಬಳಿಕ ಮಂಗಳೂರು ಪೊಲೀಸರು ಡ್ರಗ್ಸ್ ಸರಬರಾಜು ಜಾಲವನ್ನು ಮಟ್ಟಹಾಕಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನಲಾಗಿದೆ.

error: Content is protected !!