ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತೆ ಸಿಎಂ ಆದ ನಂತರವೇ ವಿಧಾನಸಭೆಗೆ ಬರುತ್ತೇನೆ ಎಂದು ಹೇಳುವ ಮೂಲಕ ತಮಿಳುನಾಡಿನಲ್ಲಿ ದಿವಂಗತ ಮಾಜಿ ಸಿಎಂ ಜಯಲಲಿತಾ 1989ರಲ್ಲಿ ಅವಮಾನ ಎದುರಿಸಿ ಮಾಡಿದ್ದ ಶಪಥದಂತೆ ಚಂದ್ರಬಾಬು ನಾಯ್ಡು ಅವರೂ ಕೂಡ ಇಂದು ಮಹತ್ವದ ಶಪಥ ಮಾಡಿದರು.
ಆಂಧ್ರ ಪ್ರದೇಶದಲ್ಲಿ ವಿಧಾನಸಭೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕಣ್ಣೀರಿಟ್ಟು ಮಾತನಾಡಿ, ತಮ್ಮ ಕುಟುಂಬದ ವೈಯುಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಅಸಭ್ಯವಾಗಿ ವಿಎಸ್ಆರ್ಪಿ ನಾಯಕರು ಶಾಸಕರು, ಮಂತ್ರಿಗಳು ಟೀಕೆ ಮಾಡುತ್ತಿದ್ದಾರೆ ದೂರಿದರು.
ನನ್ನ ಪತ್ನಿ ಹಾಗೂ ಕುಟುಂಬದ ವಿಚಾರಗಳನ್ನು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ. ಇದರಿಂದ ಸಾಕಷ್ಟು ಅವಮಾನ ಎದುರಾಗಿದೆ ಎಂದು ಹೇಳಿದರು.
ವಿಧಾನಸಭಾಗೆ 8ನೇ ಬಾರಿಗೆ ಆಯ್ಕೆಯಾಗಿ ಬಂದಿದ್ದೇನೆ. 1978ರಿಂದಲೂ ರಾಜ್ಯ ಮತ್ತು . ರಾಷ್ಟ್ರ ಮಟ್ಟದಲ್ಲೂ ನಾಯಕರೊಂದಿಗೆ ಕೆಲಸ ಮಾಡಿದ್ದೇವೆ. ಕಳೆದ ಎರಡು ವರ್ಷದಿಂದ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಯಾವತ್ತು ವೈಯುಕ್ತಿಕ ಮಟ್ಟದಲ್ಲಿ ಮಾತನಾಡಿರಲಿಲ್ಲ. ಆದರೆ ಅಸೆಂಬ್ಲಿಯಲ್ಲಿ ಈಗ ಅವಮಾನ ಮಾಡಿದ್ದಾರೆ. ಯಾವ ಕುಟುಂಬ ಮಾರ್ಯಾದೆಗಾಗಿ ಇಷ್ಟು ಕೆಲಸ ಮಾಡಿದ್ದೇವೆ ಅದಕ್ಕೆ ಅವಮಾನ ಮಾಡಿದ್ದಾರೆ ಎಂದು ಭಾವುಕರಾಗಿ ಶಪಥ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ನನ್ನ ಪತ್ನಿ ಯಾವತ್ತು ರಾಜಕೀಯಕ್ಕೆ ಬಂದಿಲ್ಲ.
ಕುಟುಂಬಸ್ಥರ ಮೇಲೆ ಅಸಭ್ಯವಾಗಿ ಮಾತುಕತೆ ನಡೆಸಿ ಚರ್ಚೆ ಮಾಡಿರಲಿಲ್ಲ. ಇಷ್ಟೇಲ್ಲಾ ಆದ ಬಳಿಕ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುವವರೆಗೂ ಅಸೆಂಬ್ಲಿಗೆ ಕಾಲಿಡುವುದಿಲ್ಲ ಎಂದರು.
- 2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
- ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ