ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಉದ್ಯಮಿ ಪ್ರಶಾಂತ್ ಸಂಬರಗಿ ಈಗ ಅನುಶ್ರೀ ಕುರಿತಾಗಿಯೂ ಟ್ವೀಟ್ ಮಾಡಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಇಲ್ಲಿಯವರೆಗೆ ಅನುಶ್ರೀ ಅರೆಸ್ಟ್ ಆಗದಂತೆ ಆಕೆಯ ಶುಗರ್ ಡ್ಯಾಡಿ ತಡೆದಿದ್ದಾರೆ. ಆದ್ರೆ ಇನ್ಮುಂದೆ ಅದು ಸಾಧ್ಯವಾಗಲ್ಲ. ಕೆಲವೇ ದಿನಗಳಲ್ಲಿ ಆಕೆಗೆ ತಕ್ಕ ಶಾಸ್ತಿಯಾಗುತ್ತೆ ಎಂದಿದ್ದಾರೆ .
ಅನುಶ್ರೀಯ ಮತ್ತಷ್ಟು ರಹಸ್ಯಗಳು ಹೊರಬರಲಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. (ಶುಗರ್ ಡ್ಯಾಡಿ ಅಂದ್ರೆ ಹಣ, ದುಬಾರಿ ವಸ್ತು ಅಥವಾ ಇತರೆ ಉಡುಗೊರೆಗಳನ್ನು ಕೊಟ್ಟು ಅದಕ್ಕೆ ಪ್ರತಿಯಾಗಿ ಯುವತಿ ಜೊತೆ ಲೈಂಗಿಕ ಸಂಬಂಧ ಹೊಂದಿರೋ ಹಿರಿಯ ವಯಸ್ಸಿನ ವ್ಯಕ್ತಿ ಅಂತ ಪದದ ಅರ್ಥ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ)
ಇಷ್ಟೇ ಅಲ್ಲದೆ ಅನುಶ್ರೀ ನಟಿಸಿದ್ದ ರಿಂಗ್ ಮಾಸ್ಟರ್ ಚಿತ್ರ ಥಾಯ್ ಸಿನಿಮಾ ‘ಕೌಂಟ್ಡೌನ್’ನ ಕಾಪಿ. ಸಿನಿಮಾದಲ್ಲಿ ಅನುಶ್ರೀ ಹಾಗೂ ಸ್ನೇಹಿತರು ಹೊಸ ವರ್ಷ ಆಚರಣೆ ವೇಳೆ ಡ್ರಗ್ ಪೆಡ್ಲರ್ಗೆ ಕರೆ ಮಾಡ್ತಾರೆ. ಆದ್ರೆ ಡ್ರಗ್ ಪೆಡ್ಲರ್ ತನ್ನ ಅಸಲಿ ಮುಖ ತೋರಿಸಿದಾಗ ಪರಿಸ್ಥಿತಿ ಕೈಮೀರಿ ಹೋಗುತ್ತೆ. ಕಲೆ ಬದುಕಿನ ಅನುರಕಣೆಯೋ ಅಥವಾ ಬದುಕು ಸಿನಿಮಾದ ಅನುಕರಣೆಯೋ..? ಅಂತ ಸಂಬರಗಿ ಪ್ರಶ್ನೆ ಮಾಡಿದ್ದಾರೆ.
ತಮ್ಮ ಟ್ವೀಟ್ಗಳ ಕುರಿತು ಪ್ರತಿಕ್ರಿಯೆ ನೀಡಲು ಸಂಬರಗಿ ನಿರಾಕರಿಸಿದ್ದಾರೆ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!