February 23, 2026

Newsnap Kannada

The World at your finger tips!

meke2

ಮಾಲೀಕನ ಜೊತೆ ಬಸ್ ಹತ್ತಿದ ಮೇಕೆ ಮರಿಗಳಿಗೂ ಫುಲ್ ಟಿಕೆಟ್ ನೀಡಿದ ಕಂಡಕ್ಟರ್!

Spread the love

ಬಸ್‍ನಲ್ಲಿ ತನ್ನ ಮಾಲೀಕನ ಜೊತೆಗೆ ಪ್ರಯಾಣ ಮಾಡುತ್ತಿದ್ದ ಮೇಕೆ ಮರಿಗಳಿಗೆ ಕೂಡ ಬಸ್ ಕಂಡಕ್ಟರ್ ಫುಲ್ ಟಿಕೆಟ್ ನೀಡಿದ್ದಾರೆ.

ಈ ಅಚ್ಚರಿಯ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಜರುಗಿದೆ.

ರೈತ ಸುನೀಲ್ ಹಾಗೂ ರಾಮಲಿಂಗ ತಮ್ಮ ಮೇಕೆ ಮರಿಗಳನ್ನು ಯಾದಗಿರಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮಕ್ಕೆ ಬಸ್ ನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದರು.

ಈ ವೇಳೆ ಬಸ್ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿ ಮೇಕೆ ಮಾಲೀಕರಿಗೆ ದಂಗು ಬಡಿಸಿದ್ದಾರೆ.

error: Content is protected !!