December 21, 2024

Newsnap Kannada

The World at your finger tips!

a8324033 02b1 4242 8dfc dae5c48db906

ಹುಟ್ಟು ಹಬ್ಬದ ದಿನವೇ ಭಕ್ತರಿಗೆ ಆಶೀರ್ವಚನ ನೀಡುತ್ತಲೇ ಕೊನೆಯುಸಿರೆಳೆದ ಸ್ವಾಮೀಜಿ

Spread the love

ಪ್ರವಚನ ಮಾಡುತ್ತಿದ್ದಾಗ ಹಠಾತ್ ಸಂಭವಿಸಿದ ಹೃದಯಾಘಾತದಿಂದ ಸ್ವಾಮೀಜಿಯೊಬ್ಬರು ಸಾವನ್ನಪ್ಪಿದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳಗ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ್ ಮಠದ ಸಂಗನಬಸವ ಮಹಾಸ್ವಾಮೀಜಿ (53)ಲಿಂಗೈಕ್ಯರಾಗಿದ್ದಾರೆ.

ನವೆಂಬರ್ 6 ರಂದು ಘಟನೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.

ಸಾವನ್ನಪ್ಪಿದ ದಿನವೇ ಸ್ವಾಮಿಜಿ ಅವರ ಹುಟ್ಟುಹಬ್ಬ ಇತ್ತು. ಹುಟ್ಟುಹಬ್ಬವನ್ನು ಆಚರಿಸಿಕೊಂಡೇ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು. ಈ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸ್ವಾಮೀಜಿ ಅಸುನೀಗುವ ದೃಶ್ಯ ಭಕ್ತರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ, ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Copyright © All rights reserved Newsnap | Newsever by AF themes.
error: Content is protected !!