December 21, 2024

Newsnap Kannada

The World at your finger tips!

hardik pandya

ಹಾರ್ದಿಕ್ ಪಾಂಡ್ಯ ತಂದಿದ್ದ 5 ಕೋಟಿ ರು ಮೌಲ್ಯದ 2 ವಾಚ್​​ಗಳನ್ನು ಜಪ್ತಿ ಮಾಡಿದ ಕಸ್ಟಮ್ಸ್ ಅಧಿಕಾರಿಗಳು

Spread the love

ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ದುಬಾರಿ ಬೆಲೆಯ ಎರಡು ವಾಚ್​​​​ಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಎರಡು ವಾಚ್​​ಗಳ ಮೌಲ್ಯ 5 ಕೋಟಿ ರು ಮೌಲ್ಯ ಎಂದು ಹೇಳಲಾಗಿದೆ.

ವಿಶ್ವಕಪ್​ನಲ್ಲಿ ಸೋಲನ್ನು ಅನುಭವಿಸಿ ಹಾರ್ದಿಕ್ ಪಾಂಡ್ಯಾ ಹಾಗೂ ಟೀಂ ಇಂಡಿಯಾದ ಕೆಲವು ಆಟಗಾರರು ಭಾನುವಾರ ದೇಶಕ್ಕೆ ವಾಪಸ್ ಆಗಿದ್ದಾರೆ.

ಹಾರ್ದಿಕ್ ಪಾಂಡ್ಯ ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಕಷ್ಟಮ್ಸ್​ ಅಧಿಕಾರಿಗಳ, ತಪಾಸಣೆ ಮಾಡಿದ ವೇಳೆ ಪಾಂಡ್ಯರ ಎರಡು ವಾಚ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ವಾಚ್​​ಗಳನ್ನು ಲಗೇಜ್​​ನಲ್ಲಿ ಇಟ್ಟುಕೊಂಡಿದ್ದರು. ಲಗೇಜ್​​ನಲ್ಲಿ ದುಬಾರಿ ಬೆಲೆಯ ವಾಚ್​ ಇರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅಲ್ಲದೇ ಆ ವಾಚ್​​ಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ ಎರಡೂ ವಾಚ್​​ಗಳನ್ನು ಕಸ್ಟಮ್ಸ್​ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕಳೆದ ವರ್ಷ ದುಬೈನಲ್ಲಿ ಐಪಿಎಲ್​ ಪಂದ್ಯಗಳನ್ನ ಆಡಿ ವಾಪಸ್ ಆದ ಸಂದರ್ಭದಲ್ಲಿ, ಮುಂಬೈ ಏರ್​ಪೋರ್ಟ್​ನಲ್ಲಿ ಇವರ ಸಹೋದರ ಕೃನಾಲ್ ಪಾಂಡ್ಯರನ್ನ ವಶಕ್ಕೆ ಪಡೆಯಲಾಹಿತ್ತು. ಇವರು ಕೂಡ ಯಾವುದೇ ದಾಖಲೆಗಳಿಲ್ಲದೇ 4 ವಾಚ್​​ಗಳನ್ನು ದುಬೈನಿಂದ ತಂದಿದ್ದರು.

Copyright © All rights reserved Newsnap | Newsever by AF themes.
error: Content is protected !!