December 20, 2024

Newsnap Kannada

The World at your finger tips!

ashwathi

ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ : ಮಂಡ್ಯ ಜಿಲ್ಲೆಯಲ್ಲಿ 4025 ಮತದಾರರು

Spread the love

ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅಧಿಸೂಚನೆ ಹೊರಡಿಸಿದ್ದಾರೆ.

ಸೋಮವಾರ ಭದ್ರತಾ ಕೊಠಡಿ ಮತ್ತು ಎಣಿಕಾ ಕೇಂದ್ರಗಳನ್ನು ಗುರುತಿಸಲು ನಗರದ ಸರ್ಕಾರಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದಿನಿಂದಲೇ ನಾಮಪತ್ರ ಸಲ್ಲಿಕೆ:

  • ಇಂದಿನಿಂದ (ನ.೧೬) ನ . ೨೩ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.
  • ನ.೨೪ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
  • ೨೬ರಂದು ಉಮೇದುವಾರಿಕೆ ವಾಪಸ್ ಪಡೆಯಲು ಕೊನೆ ದಿನವಾಗಿದೆ.
  • ಡಿ.೧೦ರಂದು ಬೆಳಿಗ್ಗೆ ೮ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ.
  • ೧೪ರಂದು ಮತ ಎಣಿಕೆ ನಡೆಯಲಿದೆ.
  • ೧೬ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
  • ನಾಲ್ಕು ನಾಮಪತ್ರ ಸಲ್ಲಿಕೆಗೆ ಅವಕಾಶ:
  • ಒಬ್ಬ ಅಭ್ಯರ್ಥಿ ಗರಿಷ್ಠ ೪ ನಾಮಪತ್ರ ಸಲ್ಲಿಸಬಹುದಾಗಿದೆ.
  • ನಾಮಪತ್ರದ ಜತೆಗೆ ಆಸ್ತಿ ವಿವರಗಳನ್ನು ಸಲ್ಲಿಸಬೇಕು.
  • ಅಭ್ಯರ್ಥಿಯ ವಯಸ್ಸು ೩೦ ವರ್ಷಗಳಿಗೆ ಕಡಿಮೆ ಇರಬಾರದು.
  • ೧೦ ಮತದಾರರ ಸೂಚಕ ಸಹಿ ಇರಬೇಕು.
  • ಸಾಮಾನ್ಯ ಅಭ್ಯರ್ಥಿ ೧೦ ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ೫ ಸಾವಿರ ರೂ. ಠೇವಣಿ ಇಡಬೇಕು.
  • ಜಿಲ್ಲೆಯಲ್ಲಿ ೪೦೨೫ ಮತದಾರರು:
  • ಮಂಡ್ಯ ನಗರಸಭೆ ಸದಸ್ಯರು, ಆರು ತಾಲೂಕುಗಳ ಪುರಸಭೆ ಸದಸ್ಯರು, ಬೆಳ್ಳೂರು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲೆಯ ೨೩೨ ಗ್ರಾಮ ಪಂಚಾಯಿತಿಗಳ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.
  • ಜಿಲ್ಲೆಯಲ್ಲಿ ಒಟ್ಟು ೪೦೨೫ ಮತದಾರರಿದ್ದಾರೆ.
  • ಇದರಲ್ಲಿ ಗ್ರಾಮ ಪಂಚಾಯಿತಿಯ ೩೮೧೮ ಸದಸ್ಯರು,
  • ಮಂಡ್ಯ ನಗರಸಭೆ ೩೫,
  • ಆರು ತಾಲೂಕುಗಳ ಪುರಸಭೆಯ ೧೫೧,
  • ಬೆಳ್ಳೂರು ಪಟ್ಟಣ ಪಂಚಾಯಿತಿ ೧೩,
  • ಒಬ್ಬರು ಸಂಸದರು, ೭ ಮಂದಿ ಶಾಸಕರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
Copyright © All rights reserved Newsnap | Newsever by AF themes.
error: Content is protected !!