December 20, 2024

Newsnap Kannada

The World at your finger tips!

WhatsApp Image 2021 11 15 at 4.25.03 PM

ಬಿಜೆಪಿಗೆ ತೊರೆದು ಶೀಘ್ರದಲ್ಲೇ ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಗೆ ಸಿದ್ದತೆ ನಡೆಸಿರುವ ಎ. ಮಂಜು?

Spread the love

ರಾಜ್ಯ ರಾಜಕೀಯದಲ್ಲಿ ಯಾವ ಬೆಳವಣಿಗೆ ಬೇಕಾದರೂ ನಡೆಯಬಹುದು. ಬಿಜೆಪಿ ನಾಯಕ, ಮಾಜಿ ಸಚಿವ ಎ.ಮಂಜು, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗಿ, ಪುನಃ ಕಾಂಗ್ರೆಸ್ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ

ಈ ಹಿಂದೆ ಕಾಂಗ್ರೆಸ್​​ನಲ್ಲಿಯೇ ಇದ್ದ ಎ.ಮಂಜು 2019 ಮಾರ್ಚ್​​ನಲ್ಲಿ ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಬಿಜೆಪಿಯಿಂದ ಕಾಂಗ್ರೆಸ್​ ಸೇರುತ್ತಾರೆ ಅನ್ನೋ ವದಂತಿ
ಹರಡಿದೆ

ಕಳೆದ ರಾತ್ರಿ ಸಿದ್ದರಾಮಯ್ಯರ ಸರ್ಕಾರಿ ನಿವಾಸದಲ್ಲಿ ಎ.ಮಂಜು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕೆಲವು ವರದಿಗಳ ಪ್ರಕಾರ, ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

2023ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಟ್ಟುಕೊಂಡು ಎಂ.ಮಂಜು ಅವರನ್ನು ಅತೀ ಶೀಘ್ರದಲ್ಲೇ ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್​ ಕೂಡ ಮುಂದಾಗಿದೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!