January 8, 2025

Newsnap Kannada

The World at your finger tips!

punith raj6

ಅಪ್ಪು ಪತ್ನಿ ,ಮಕ್ಕಳು ನೊಂದಿದ್ದಾರೆ – ಅಭಿಮಾನಿಗಳಲ್ಲಿ ಕೆಲವರ ಆತ್ಮಹತ್ಯೆ. ನೋವು ತಂದಿದೆ

Spread the love

ಪುನೀತ್​ ಅಕಾಲಿಕ ನಿಧನದಿಂದ ಅಪ್ಪು ಅಭಿಮಾನಿಗಳ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಇದು ದೊಡ್ಡ ಮನೆ ಕುಟುಂಬಕ್ಕೆ ಭಾರೀ ನೋವು ತಂದಿದೆ. ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳು ಸಾಕಷ್ಟು ನೊಂದುಕೊಂಡಿದ್ದಾರೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ರಾಘವೇಂದ್ರ . ಅಪ್ಪುವಿನ ಅಗಲಿಕೆಯಿಂದ ಈಗಾಗಲೇ ನೋವಿನಲ್ಲಿದ್ದೀವಿ, ಅಭಿಮಾನಿಗಳು ಅನಾಹುತ ಮಾಡಿಕೊಂಡು ಮತ್ತೆ ನಮಗೆ ನೋವು ಕೊಡಬೇಡಿ. ಪತಿಯಲ್ಲದೆ ಪತ್ನಿ ಅಶ್ವಿನಿ, ಅಪ್ಪನಿಲ್ಲದೆ ಮಕ್ಕಳು ತುಂಬಾ ನೋವಿನಲ್ಲಿದ್ದಾರೆ. ಆದರೆ ಅಭಿಮಾನಿಗಳ ಆತ್ಮಹತ್ಯೆಗೆ ನನ್ನ ಯಜಮಾನ ಕಾರಣರಾಗುತ್ತಿದ್ದಾರೆ ಎಂಬ ಕೊರಗಿನಿಂದ ಅವರು ತುಂಬಾ ನೋವಿನಲ್ಲಿದ್ದಾರೆ ಎಂದು ಹೇಳಿದರು.

ರಾಜ್ಯದ ನಾನಾ ಕಡೆ ಅಭಿಮಾನಿಗಳ ಸಾವಿನ ಸುದ್ದಿಗಳನ್ನು ಟಿವಿಯಲ್ಲಿ ನೋಡುತ್ತಿದ್ದರೆ ನಮಗೆ ತುಂಬಾ ನೋವಾಗುತ್ತದೆ. ಇದರಿಂದ ನೊಂದುಕೊಂಡ ಅಪ್ಪು ಪತ್ನಿ ನಾನು ಹೊರಗಡೆ ಬರಲ್ಲ ಅಂತಿದ್ದಾರೆ. ಯಾರೂ ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ರಾಘಣ್ಣ ಮನವಿ ಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!