March 16, 2026

Newsnap Kannada

The World at your finger tips!

punith

ನ.16ಕ್ಕೆ ಅರಮನೆ ಮೈದಾನದಲ್ಲಿ ಪವರ್ ಸ್ಟಾರ್‌ ಪುನೀತ್ ಗೆ ನುಡಿ ನಮನ

Spread the love

ಪುನೀತ್ ರಾಜ್‍ಕುಮಾರ್ ಗೆ ಸ್ಯಾಂಡಲ್‍ವುಡ್ ನವೆಂಬರ್ 16 ರಂದು ಬೆಂಗಳೂರಿನಲ್ಲಿ
ಬೃಹತ್ ನುಡಿ ನಮನ-ಗೀತ ನಮನ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸುತ್ತಿದೆ

ನವೆಂಬರ್ 16ರಂದು ಅರಮನೆ ಮೈದಾನದ ಒಳಾಂಗಣ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಪ್ರತಿಕ್ರಿಯಿಸಿ, ಪುನೀತ್ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಚಿತ್ರರಂಗಕ್ಕೆ ಇಲ್ಲ ಎಂದರು.

ಕಾರ್ಯಕ್ರಮಕ್ಕೆ ಶಿವಣ್ಣ ಒಪ್ಪಿದ್ದಾರೆ. ರಾಜ್ಯದ ಗಣ್ಯರು, ಚಿತ್ರರಂಗದ ಕುಟುಂಬ, ಆಂಧ್ರ, ತಮಿಳುನಾಡು ಸೇರಿದಂತೆ 20 ಲಕ್ಷ ಜನ ಬರುವ ಸಾಧ್ಯತೆ ಇದೆ. ಗುರುಕಿರಣ್ ಸಂಗೀತ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ನಾಗೇಂದ್ರ ಪ್ರಸಾದ್ ವಿಶೇಷ ಹಾಡನ್ನು ಬರೆದಿದ್ದಾರೆ ಎಂದರು.

error: Content is protected !!