December 19, 2024

Newsnap Kannada

The World at your finger tips!

covaccin

ಭಾರತದ ಕೋವ್ಯಾಕ್ಸಿನ್ ತುರ್ತು ಬಳಕೆಗೆ WHO ಗ್ರೀನ್ ಸಿಗ್ನಲ್

Spread the love

ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸಿದ ಕೋವ್ಯಾಕ್ಸಿನ್ ಲಸಿಕೆ ​ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.

ಕೊರೋನಾ ವೈರಸ್​​ನಿಂದ ತಪ್ಪಿಸಿಕೊಳ್ಳಲು ಲಸಿಕೆ ಇಲ್ಲದ ದೇಶಗಳು ತುರ್ತಾಗಿ ಭಾರತದ ಕೋವ್ಯಾಕ್ಸಿನ್​​​ ಬಳಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರು ಎಲ್ಲಾ ದೇಶಗಳಿಗೂ ಹೋಗಬಹುದು.

ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಬಳಿಕ ಎಲ್ಲಾ ದೇಶಗಳು ಈಗ ಕೋವ್ಯಾಕ್ಸಿನ್​​ ಬಳಸಬಹುದು. ಕೊವಿಶೀಲ್ಡ್ ಜತೆ ಈಗ ಕೊವ್ಯಾಕ್ಸಿನ್ ಕೂಡ ವಿಶ್ವ ಅಧಿಕೃತ ಲಸಿಕೆಗಳ ಪಟ್ಟಿಗೆ ಸೇರಿದೆ.

ಭಾರತದ ಕೋವ್ಯಾಕ್ಸಿನ್​​ಗೆ ಅನುಮೋದನೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ತಕರಾರು ಮಾಡುತ್ತಲೇ. ಕೋವ್ಯಾಕ್ಸಿನ್​​ ಸಂಬಂಧ ಹಲವು ಡೀಟೈಲ್ಸ್​ ನಮಗೆ ಸಿಕ್ಕಿಲ್ಲ ಎಂದು ಖ್ಯಾತೆ ತೆಗೆಯುತ್ತಿತ್ತು.

ಭಾರತ ಯಾವಾಗ ಇತರ ದೇಶಗಳಿಗೆ ಲಸಿಕೆ ನೀಡೋದಿಲ್ಲ ಎಂದು ಕೆಲವು ಕ್ರಮಗಳನ್ನು ತೆಗೆದುಕೊಂಡಿತೋ ಅಂದು ಮೋದಿ ಸರ್ಕಾರದ ಒತ್ತಡಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಣಿದಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊನೆಗೂ ಭಾರತ ಕೋವ್ಯಾಕ್ಸಿನ್​​ಗೆ ಅನುಮೋದನೆ ನೀಡಿದೆ. ಈ ಮುನ್ನ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಕೋವ್ಯಾಕ್ಸಿನ್​​ ಅನುಮೋದಿಸಿದ್ದವು.

Copyright © All rights reserved Newsnap | Newsever by AF themes.
error: Content is protected !!