ಅಕ್ರಮ ಹಣ ವರ್ಗಾವಣೆ : ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್‌ ದೇಶಮುಖ್‌ ಬಂಧನ

Team Newsnap
1 Min Read

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್‌ ದೇಶಮುಖ್‌ರನ್ನು ಇಂದು ಬೆಳಗಿನ ಜಾವ ED ಅಧಿಕಾರಿಗಳು ಬಂಧಿಸಿದ್ದಾರೆ.

ದೇಶ್ ಮುಖ್ ವಿಚಾರಣೆಗಾಗಿ ನಿನ್ನೆ ಇಡಿ ಕಚೇರಿಗೆ ಹೋಗಿ ಸುಮಾರು 12 ಗಂಟೆಗಳ ಕಾಲ ಸತತವಾಗಿ ವಿಚಾರಣೆಗೆ ಒಳಗಾಗಿದ್ದರು.

ಈ ವಿಚಾರಣೆ ಮುಗಿಸಿದ ನಂತರ ಇಡಿ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ಅಧಿಕೃತವಾಗಿ ಬಂಧನ ಮಾಡಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ 19ರ ಅಡಿಯಲ್ಲಿ ದೇಶ್‌ಮುಖ್‌ರನ್ನ ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇನ್ನು ಪ್ರಕರಣ ಸಂಬಂಧ ಎರಡು ದಿನಗಳ ಹಿಂದೆ ಮಧ್ಯವರ್ತಿಯೋರ್ವನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.

ಅನಿಲ್​ ದೇಶ್​ಮುಖ್ ನಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದಾರೆ. ಮಹಾರಾಷ್ಟ್ರ ಆಡಳಿತರೂಢ ಸರ್ಕಾರದ ಸದಸ್ಯರಾಗಿದ್ದಾರೆ. ಇ.ಡಿ ಅಧಿಕಾರಿಗಳು ಬರೋಬ್ಬರಿ 6 ಬಾರಿ ದೇಶ್​​ಮುಖ್​ ಅವರಿಗೆ ನೋಟಿಸ್​ ಜಾರಿ ಮಾಡಿದ್ದರು. ಆದರೆ ಐದು ಬಾರಿಯೂ ವಿಚಾರಣೆಗೆ ಹಾಜರಾಗದ ಅವರು ಕೊನೆಗೂ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.

ಮೊದಲು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದ ದೇಶ್​​ಮುಖ್​​, ಬಾಂಬೇ ಹೈಕೋರ್ಟ್​ ಸಚಿವರ ವಿರುದ್ಧ ಸಿಬಿಐ ವಿಚಾರಣೆಗೆ ಅನುಮತಿ ನೀಡಿದ ಬಳಿಕ ಏಪ್ರಿಲ್ 5 ರಂದು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸ್ಮರಿಸಬಹುದು.

Share This Article
Leave a comment