January 10, 2025

Newsnap Kannada

The World at your finger tips!

HDK,politics, election

ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದರೆ - ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸುವೆ - ಹೆಚ್ ಡಿ ಕೆ

ಕರ್ಚೀಪ್​ಗೆ ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತೀಯಾ! ಹೆಚ್​ಡಿಕೆ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ

Spread the love

ಕರ್ಚೀಪ್​ಗೆ ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತೀಯಾ! ಎಂದು ಏಕ ವಚನದಲ್ಲಿ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ಮಾಡಿದರು.

kumarswamy srinivas

ತುಮಕೂರಿನಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್‌ಆರ್ ಶ್ರೀನಿವಾಸ್ ಸಿದ್ದರಾಮಯ್ಯ ಎದುರಿನಲ್ಲೇ ಹೆಚ್ ಡಿಕೆ ಶೇಪ್ ಔಟ್ ಔಟ್ ಮಾಡಿದರು

ಮೊನ್ನೆ ನಡೆದ ಸಭೆ ನನಗಾಗಲಿ ನಮ್ಮ ಕಾರ್ಯಕರ್ತರಿಗಾಗಲೀ ಗೊತ್ತಿಲ್ಲದೆ ನಡೆದ ಸಭೆ ಅದು. ಆ ಸಭೆಗೆ ಮಾನ ಮರ್ಯಾದೆ ಇದ್ರೆ ಯಾರೂ ಹೋಗಬೇಡಿ ಅಂತಾ ಹೇಳಿದ್ದೆ ಎಂದರು.

ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಅಂತಾ ಹೇಳಿದ್ದೆ. ನಿಂಗೆನಾರ ಮಾನ ಮರ್ಯಾದೆ ಇದ್ಯಾ..? ನಾಚಿಕೆ ಆಗಲ್ವಾ ನಿನಗೆ. ನಿಂದು ನಾಲಿಗೆನಾ ಮತ್ತಿನ್ನೇನು..? ಹೊಟ್ಟೆಗೆ ಏನ್ ತಿಂತಿಯಾ.. ಮಾಟ ಮಂತ್ರ ಮಾಡೋ ಕುಟುಂಬ ನಿನ್ನದು ಎಂದು ಏಕ ವಚನದಲ್ಲಿ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಯಿ ಬಿಟ್ಟರೆ ಅಸತ್ಯ, ಕರ್ಚೀಪ್​ಗೆ ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತಿಯಾ.. ಎಂಥಾ ಆಸಾಮಿಗಳು ಇವರು. 20 ವರ್ಷ ಪಕ್ಷ ಕಟ್ಟಿದ್ದ ನನ್ನ ಆಚೆಗೆ ಹಾಕ್ತಿಯಾ.. ಗಣಿ ದುಡ್ಡು ಬಂತು ಅಂತೇಳಿ ಯಾರನ್ನೋ ಕರೆ ತಂದ್ಯಲ್ಲ. ನಿನಗೆ ಮಾನಮರ್ಯಾದೆ ಇದೆಯಾ..? ಮೊಸಳೆ ಕಣ್ಣೀರಿನ ಮೂಲಕ ಜನರನ್ನು ತಲುಪಲು ಆಗಲ್ಲ. ಮೊಸಳೆ ಕಣ್ಣೀರು ಹಾಕಿದ್ರೆ ಯಾರು ನಂಬುತ್ತಾರೆ..? ಜನರಿಗೆ ನೀಡಿದ ಕಾರ್ಯಕ್ರಮಗಳ ಮೂಲಕ ಜನರ ಬಳಿ ಹೋಗಬೇಕು. ಮುಂದೆ ನಮಗೆ ದಿಕ್ಕಿಲ್ಲ, ಇವರೇ ನಮಗೆ ದಿಕ್ಕು, ನನಗೆ ಯಾರೂ ದಿಕ್ಕಿಲ್ಲ. ಕಾಂಗ್ರೆಸ್​ನವರೇ ಈಗ ನನಗೆ ದಿಕ್ಕು.

ಸಿದ್ದರಾಮಣ್ಣ ಜೊತೆಯಲ್ಲಿ ಕರಕೊಂಡು ಹೋದರೆ ಅವರ ಜೊತೆ ಹೋಗ್ತೇನೆ. ನಾನು ದೇವೇಗೌಡರ ಕತ್ತು ಕೊಯ್ದೆ ಅಂತಾರೆ ಕುಮಾರಸ್ವಾಮಿ. ಅಲ್ಲಿ ಶಿವನಂಜಪ್ಪಗೆ ಟಿಕೆಟ್ ಕೊಟ್ಟು, ನಂಗೆ ಇಂಡಿಪೆಂಡೆಂಟ್ ಆಗಿ ನಿಂತ್ಕೊಳ್ಳಿ ಅಂದೋರು ಯಾರು..? ಹಾಗಾದ್ರೆ ಶಿವನಂಜಪ್ಪಗೆ ಕತ್ತುಕೊಯ್ದಿದ್ದು ಯಾರು.? ಎಂದು ಪ್ರಶ್ನೆ ಮಾಡಿದರು.

Copyright © All rights reserved Newsnap | Newsever by AF themes.
error: Content is protected !!