January 16, 2025

Newsnap Kannada

The World at your finger tips!

v somanna

Tumkur Lok Sabha seat ticket for Somanna? MP Basavaraj ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ? ಸಂಸದ ಬಸವರಾಜ್

ಮುಂದಿನ ಸಿಎಂ ಬೊಮ್ಮಾಯಿ -ಸಚಿವ ವಿ.ಸೋಮಣ್ಣ

Spread the love

ಮುಂದಿನ ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ಎಂದ ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸೋಮಣ್ಣ , ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಮಾಡ್ತೀವಿ ಅಂದ್ರೆ ಏನು ಅರ್ಥ ಎಂದರೇ ಮುಂದಿನ ಸಿಎಂ ಅವರೇ ಎಂದರ್ಥ ಎಂದರು.

ಅಶೋಕ ಹೇಳಿರುವುದೂ ಅದೇ ಅರ್ಥ, ನಾನು ಹೇಳೊದು ಅದೇ ಅರ್ಥ. ಆದ್ದರಿಂದ ಮುಂದಿನ ಸಿಎಂ ಬೊಮ್ಮಾಯಿ ಎಂದರು.

ಉಸ್ತುವಾರಿ ಯಾರಿಗೆ ಕೊಟ್ಟರೇನು?

ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ಕೊಟ್ಟರೇನು.. ಅದು ಮುಗಿದ ಅಧ್ಯಾಯ. ನಾನು ಒಂದೇ ಸಾರಿ ಹೇಳೊದು ಎರಡನೇ ಸಾರಿ ಹೇಳಿದ್ರೆ ಮಜಾ ಸಿಗಲ್ಲ. ಒಂದು ಸಾರಿ ಹೇಳಿದ್ದೀನಿ. ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಸದ್ಯಕ್ಕೆ ತೊಂದರೆ ಏನಿಲ್ಲ ಮತ್ತೆ 2023ಕ್ಕೆ ನಾವು ಅಧಿಕಾರ ಹಿಡಿಬೇಕು ಎಂದರು.

ಸರ್ಕಾರ ಶೋಕಾಚರಣೆ ಜೊತೆಯಲ್ಲಿ ರಾಜಕುಮಾರ ಇತಿಹಾಸ ಬಲ್ಲವರಾಗಿ ಅವರ ಕುಟುಂಬ ಜೊತೆ ಈಡಿ ದೇಶ ಕುಟುಂಬ ಕಂಬನಿ ಮಿಡಿದಿದೆ. ಸರ್ಕಾರಿ ಗೌರವಗಳೊಂದಿಗೆ ಇಂದು ಬೆಳಿಗ್ಗೆ ಅಂತ್ಯಕ್ರಿಯೆ ಆಗಿದೆ. ಬೈ ಎಲೆಕ್ಷನ್ ಮುಗಿದಿದ್ದು, ಹಾನಗಲ್ ಶೇ.83, ಸಿಂದಗಿ ಶೇ.69 ರಷ್ಟು ಮತದಾನ ನಡೆದಿದೆ. ಸಿಂದಗಿಯಲ್ಲಿ 18ರಿಂದ 20 ಸಾವಿರಕ್ಕೆ ಅಂತರದಿಂದ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!