ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 20-20ಯ 12 ನೇ ದಿನದ ಮ್ಯಾಚ್ ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ, ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ 37 ರನ್ ಗಳ್ ಜಯ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ,ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಶುಭಮನ್ ಗಿಲ್ ಹಾಗೂ ಸುನಿಲ್ ನರೈನ್ ಅವರು ಉತ್ತಮ ಜೋಡಿಯಾಟ ನೀಡುವ ಭರವಸೆಯನ್ನು ಮೂಡಿಸಿದ್ದರು. ಆದರೆ ಕೇವಲ 15 ರನ್ ಗಳಿಗೆ ನರೈನ್ ಜಯದೇವ ಉದನ್ಕತ್ ಅವರ ಬೌಲಿಂಗ್ ಔಟಾದಾಗ ಅಭಿಮಾನಿಗಳಲ್ಲಿ ನಿರಾಸೆ ಮೂಡಿತು. ನಂತರ ಬಂದ ನಿತೇಶ್ ರಾಣ (17 ಎಸೆತಗಳಿಗೆ 22 ರನ್) ಹಾಗೂ ಆಂಡ್ರೋ ರಸೆಲ್ (14 ಎಸೆತಗಳಿಗೆ 24 ರನ್) ತಂಡವನ್ನು ಸುಭದ್ರಗೊಳಿಸಲು ಪ್ರಯತ್ನಿಸಿದರು. ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.
ನೈಟ್ ರೈಡರ್ಸ್ ತಂಡದ ಸವಾಲನ್ನು ಬೆನ್ನಟ್ಟಿದ ರಾಯಲ್ಸ್ . ಆಟದ ಪ್ರಾರಂಭಕ್ಕೆ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಜೋಸ್ ಬಟ್ಲರ್ ಮೈದಾನಕ್ಕೆ ಬಂದರು. ಸ್ಟೀವ್ ಅವರು ಕೇವಲ 3 ರನ್ ಗಳಿಗೇ ಪೆವಿಲಿಯನ್ ಸೇರಿದರು. ಜೋಸ್ ಅವರು 16 ಬಾಲ್ ಗಳಲ್ಲಿ 21 ರನ್ ಗಳಿಸಿ ಶಿವಮ್ ಮಾವಿ ಅವರ ಬೌಲಿಂಗ್ ನಲ್ಲಿ ಔಟಾದರು. ನಂತರ ಬಂದ ಟಾಮ್ ಅವರು 36 ಎಸೆತಗಳಿಗೆ 54 ರನ್ ಗಳಿಸಿ ತಂಡದ ಶಕ್ತಿ ವೃದ್ಧಿಸುವಲ್ಲಿ ಪ್ರಯತ್ನ ಮಾಡಿದರು. ಆದರೆ ಕೋಲ್ಕತ್ತ ತಂಡದ ಶಿವಮ್ ಮಾವಿ ಹಾಗೂ ಕಮಲೇಶ್ ನಾಗರಕೋಟಿ ಅವರ ದುಸಸ್ಸಾಧ್ಯವಾದ ಬೌಲಿಂಗ್ ನ್ನು ಎದುರಿಸಬೇಕಾಯ್ತು. ತಂಡ 20 ಓವರ್ ಗಳಲ್ಲಿ ತಂಡ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
ಹ್ಯಾಟ್ರಿಕ್ ಗೆಲುವು ಸಾಧಿಸಬಹುದಾಗಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮುಗ್ಗರಿಸಿ 37 ರನ್ ಗಳಿಂದ ಸೋತಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ