ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬಳುವ ನೇರಳು ಗೇಟ್ ಬಳಿ ಸಂಭವಿಸಿದೆ
ಜೀಪ್ಗೆ ಬೈಕ್ ಡಿಕ್ಕಿಯಾಗಿ ಸಂಭವಿಸಿದ ಈ ಅಪಘಾತದಲ್ಲಿ ನಾಗರಾಜು(60) ಚಿದಾನಂದ(45) ಸಾವನ್ನಪ್ಪಿದ್ದಾರೆ.
ಬಳುವ ನೇರಳು ಗೇಟ್ ಬಳಿ ಹೊನ್ನವಳ್ಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸವಾರ ಬೈಕ್ ಬೇರೆಡೆಗೆ ತಿರಿಗಿಸಲು ಮುಂದಾಗಿದ್ದಾನೆ.
ಕೂಡಲೇ ಎದುರಿಗೆ ಬರುತ್ತಿದ್ದ ಜೀಪ್ಗೆ ಬೈಕ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸಂಭವಿಸಿದ ಅಪಘಾತದ ರಬಸಕ್ಕೆ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನು, ಬೈಕ್ನಲ್ಲಿ ತಿಪಟೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳದಲ್ಲಿ ನೂರಾರು ಜನ ಸೇರಿದ್ದು, ಇದಕ್ಕೆಲ್ಲಾ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.
More Stories
ಡೆಂಘಿ ಜ್ವರಕ್ಕೆ 7 ವರ್ಷದ ಬಾಲಕ ಬಲಿ: ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ
ಚಿನ್ನದ ಹಗರಣ: 50ಕ್ಕೂ ಅಧಿಕ ಮಂದಿ ವಂಚನೆಗೆ ಬಲಿ!
ಪ್ರಥಮ ಪಿಯುಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು