ಆನೆ ಹೋಗುತ್ತಿದ್ದಾಗ ನಾಯಿ ಬೊಗಳಿದರೆ ಏನಾಗುತ್ತೆ? ನಾಯಿಗಳಿಗೆ ಉತ್ತರ ಕೊಡಲು ಸಾಧ್ಯನಾ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಶಾಸಕ ಜಮೀರ್ ಅಹ್ಮದ್‍ಗೆ ತಿರುಗೇಟು ನೀಡಿದ್ದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಆನೆ ಹೋಗುತ್ತಿದ್ದರೆ ನಾಯಿ ಬೊಗಳಿದರೆ ಏನಾಗುತ್ತದೆ? ಏನು ಆಗಲ್ಲ. ಆನೆ ದಾರಿ ಆನೆಗೆ. ಜಮೀರ್ ಟೀಕೆಗೆ ಉತ್ತರ ಕೊಡಲು ಅನ್ ಫಿಟ್ ಎಂದು ಜಮೀರ್‌ರನ್ನು ನಾಯಿಗೆ ಹೋಲಿಸಿದ್ದಾರೆ.
ನಾನು ಸ್ವತಃ ದುಡಿಮೆ ಮಾಡಿ ಬದುಕು ಕಟ್ಟಿಕೊಂಡಿದ್ದಾನೆ. ಇವರಿಗೆಲ್ಲಾ ನನ್ನ ಬ್ಯಾಕ್ ಗ್ರೌಂಡ್ ಏನೂ ಗೊತ್ತಿದೆ. ಇವರೆಲ್ಲಾ ಅವತ್ತು ಎಲ್ಲಿದ್ದರು ಎಂದು ಪ್ರಶ್ನೆ ಮಾಡಿದರು.
ಓದುವಾಗ ಕಸದ ಟೆಂಡರ್ ಪಡೆದು ದುಡಿಮೆ ಮಾಡುತ್ತಿದ್ದೆ. ಚಿತ್ರದ ಹಂಚಿಕೆದಾರನಾಗಿ ದುಡಿಮೆ ಮಾಡಿದ್ದೇನೆ. ಬಡ್ಡಿಗೆ ದುಡ್ಡು ಪಡೆದು ಚಿತ್ರ ಪಡೆದು ಸಿನಿಮಾ ಹಂಚಿಕೆ ಮಾಡುತ್ತಿದ್ದೆ. ದೇವೇಗೌಡರ ಹೆಸರಿನಿಂದ ನೂರು ಪಟ್ಟು ಹಣ ಸಂಪಾದಿಸಬಹುದಿತ್ತು. ನಾನು ಆ ಕೆಲಸ ಮಾಡಲಿಲ್ಲ ಎಂದರು.
ವಿಧಾನಸೌಧದಲ್ಲಿ ಯಾವ ಕೆಲಸ ಆಗುತ್ತಿಲ್ಲ. ಎಲ್ಲರೂ ಉಪ ಚುನಾವಣೆಯಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆ ಮರೆತು ಎಲ್ಲಾ ಮಂತ್ರಿಗಳನ್ನು ಚುನಾವಣೆಗೆ ನಿಯೋಜಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಜೆಡಿಎಸ್‍ನಲ್ಲಿ ದೊಡ್ಡ ನಾಯಕರಿಲ್ಲ. ನಮ್ಮಲ್ಲಿ ಕಾರ್ಯಕರ್ತರೆ ನಾಯಕರು. ನಾಳೆ ಪುನಃ ಹಾನಗಲ್, ಸಿಂಧಗಿಗೆ ಹೋಗುತ್ತೇನೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ ಪ್ರತಿಫಲವಾಗಿ ಜೆಡಿಎಸ್ ನೆಲಕಚ್ಚಿತು. ನಮ್ಮ ಪಕ್ಷಕ್ಕೆ ದೊಡ್ಡ ಅನಾಹುತಗಳೇ ಆದವು ಎಂದರು.
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
More Stories
ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ