December 26, 2024

Newsnap Kannada

The World at your finger tips!

4525

ವಿಚ್ಛೇದಿತ 25 ವರ್ಷದ ಮೇಘನಾ , ಅವಿವಾಹಿತ 45ರ ಶಂಕರ್ ಜೊತೆ ಸಪ್ತಪದಿಗೆ ಹೆಜ್ಜೆ ಹಾಕಿದಳು….,,

Spread the love

ಅವಿವಾಹಿತ 45 ವರ್ಷದ ಶಂಕರ್ ಗೆ , 25 ವರ್ಷದ ವಿಚ್ಛೇದಿತ
ಮೇಘನಾ ಎಂಬಾಕೆಯೊಂದಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ವಯಸ್ಸಿನಲ್ಲಿ ತನಗಿಂತ 20 ವಷ೯ ಅಂತರವಿದ್ದರೂ ಮೇಘನಾ ಮನಸಾರೆ ಒಪ್ಪಿ ಶಂಕರ್ ಕಟ್ಟುವ ಮಾಂಗಲ್ಯಕ್ಕೆ ಕೊರಳೊಡ್ಡಿದ್ದಾಳೆ.

ಇವರಿಬ್ಬರ ಮದುವೆಗೆ ಮನೆಯವರ ವಿರೋಧ ಇರಲಿಲ್ಲ. ಬದಲಾಗಿ ಎರಡೂ ಕುಟುಂಬದಿಂದ ಒಪ್ಪಿಗೆ ಸಿಕ್ಕಿ, ಪ್ರೀತಿಯಿಂದ, ಸಡಗರ, ಸಂಭ್ರಮದಿಂದ ಮದುವೆ ಆಗಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಈ ಮದುವೆ ಸಾಕಷ್ಟು ಪ್ರಚಾರ ಗಿಟ್ಟಿಸಿದೆ

ಮೇಘನಾರ (25)ಬದುಕಿನಲ್ಲಿ ವಿಧಿ ಚೆಲ್ಲಾಟ ಆಡಿಬಿಟ್ಟಿತ್ತು. ನೂರು ವರ್ಷಗಳ ಕಾಲ ಸತಿ-ಪತಿಯಾಗಿ ಬದುಕಬೇಕು ಅನ್ನೋ ಆಸೆಯಿಂದ ಸಪ್ತಪದಿ ತುಳಿದ ಆಕೆಯ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಕೊನೆಗೂ ಹೊಂದಾಣಿಕೆ ಅಸಾಧ್ಯ ಎಂದು ಗೊತ್ತಾದಾಗ, ಗಂಡ ವಿಚ್ಛೇದನ ನೀಡಿದ. ಆಕೆಯನ್ನು ಅನಾಥಳನ್ನಾಗಿ ಮಾಡಿಬಿಟ್ಟಿದ್ದ. ಗಂಡನ ಬಿಟ್ಟವಳು ಎಂದು ಸಮಾಜದಲ್ಲಿ ನಿಂದನೆಗೆ ಒಳಗಾಗುತ್ತಿರುವ ವೇಳೆಯಲ್ಲಿ 45 ವಷ೯ದ ಈ ಶಂಕರ್ ಮದುವೆಯಾಗಲು ಮುಂದಾದರು

ಹೆಣ್ಣು ಹುಡುಕಿ, ಹುಡುಕಿ ಸುಸ್ತಾಗಿದ್ದ ಶಂಕರ್​ ಕಣ್ಣಿಗೆ ಬಿದ್ದಿದ್ದೇ ಈ ಮೇಘನಾ. ಕೊನೆಗೂ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆ ಆಗಲು ನಿರ್ಧರಿಸುತ್ತಾರೆ.

ಅದರಂತೆ ಸ್ಥಳೀಯ ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!