February 21, 2026

Newsnap Kannada

The World at your finger tips!

horatti

Basavaraj horatti victory in Western Teachers field

RSS ಮುಖಂಡರು ಹೇಳುವ ಕೆಲವು ವಿಚಾರ ಸರಿ – ಹೊರಟ್ಟಿ

Spread the love

RSS ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರತ್ತವೆ ಎಂದು ಆರ್‌ಎಸ್‍ಎಸ್‍ ಮೇಲೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೃದುಧೋರಣೆಯ ಹೇಳಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಕುಮಾರಸ್ವಾಮಿ ಆರ್‌ಎಸ್‍ಎಸ್‍ ಕುರಿತು ಹೇಳಿಕೆ ವಿಚಾರವಾಗಿ ನಾನು ರಾಜಕಾರಣವನ್ನು ಮಾತಾನಾಡೋದಿಲ್ಲ. ಆರ್‌ಎಸ್‍ಎಸ್‍ ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರತ್ತವೆ ಎಂದರು.

ಕುಮಾರಸ್ವಾಮಿ ಅವರ ಆರ್ ಎಸ್ ಎಸ್. ಹೇಳಿಕೆವೈಯಕ್ತಿಕವಾಗಿದೆ. ನಾನು ಏನೂ ಮಾತನಾಡುವದಿಲ್ಲ ಎಂದು ಆರ್‌ಎಸ್‍ಎಸ್‍ ಮೇಲೆ ಮೃದು ಧೋರಣೆಯನ್ನು ತೋರಿದ್ದಾರೆ.

ಅಂದಿನ ರಾಜಕಾರಣ ತತ್ವದ ಆಧಾರದ ಮೇಲೆ ಇತ್ತು. ಇವತ್ತಿನ ರಾಜಕಾರಣ ಬರೀ ಟೀಕೆ ಮಾಡೋದಾಗಿದೆ. ಇದು ಜನರಿಗೆ ಬೇಜಾರಾಗಿದೆ. ಎಲ್ಲ ಪಕ್ಷದವರಿಗೂ ನಾನು ಹೇಳುತ್ತೆನೆ, ಬರೀ ಟೀಕೆ ಮಾಡಿ ಜನರ ಮೇಲೆ ಪರಿಣಾಮ ಬಿರೋದಿಲ್ಲ. ನಾವು ಏನ್ ಕೆಲಸ ಮಾಡುತ್ತೇವೆ ಅನ್ನೋದು ಜನರಿಗೆ ಗೊತ್ತಾಗಬೇಕು ಎಂದು ಹೊರಟ್ಟಿ ಇಂದಿನ ರಾಜಕೀಯ ಸ್ಥಿತಿ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!