December 21, 2024

Newsnap Kannada

The World at your finger tips!

WhatsApp Image 2020 09 29 at 23.43.34

ಬೇರ್ಸ್ಟೋವ್ ಅದ್ಭುತ ಆಟ; ಕ್ಯಾಪಿಟಲ್ಸ್ ನ್ನು ಪರಾಭವಗೊಳಿಸಿದ ರೈಸರ್ಸ್

Spread the love

ಇಂದು ದುಬೈನ ಅಬು ಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 20-20ಯ 11ನೇ ದಿನದ ಮ್ಯಾಚ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ತನ್ನ ಗೆಲುವಿನ ಖಾತೆಯನ್ನು ತೆರೆಯಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡಲ್ಲಿ ಕ್ಯಾಪಿಟಲ್ಸ್ , ಸನ್ ರೈಸರ್ಸ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ನಾಯಕ ಡಿ ವಾರ್ನರ್ ಹಾಗೂ ಉಪನಾಯಕ ಜೆ. ಬೇರ್ಸ್ಟೋವ್ ಅವರು ಉತ್ತಮ ಆಟ ಪ್ರಾರಂಭ ಮಾಡಿದರು. ಡಿ. ವಾರ್ನರ್ 33 ಬೌಲ್ ಗಳಿಗೆ 45 ರನ್ ಹಾಗೂ ಜೆ. ಬೇರ್ಸ್ಟೋವ್ 48 ಬೌಲ್‌ಗಳಿಗೆ 53 ರನ್‌ ಗಳಿಸಿ ತಂಡವನ್ನು ಭದ್ರಗೊಳಿಸಿದರು. ಆದರೆ ಬೇರ್ಸ್ಟೋವ್ನಂತರ ಬಂದ ನಿರೀಕ್ಷಿತ ಅಟಗಾರ ಮನೀಶ್ ಪಾಂಡೆ ಕೇವಲ 3 ರನ್ ಗಳಿಗೆ ಪೆವಿಲಿಯನ್ ಸೇರಿದರು. ಕೆ. ವಿಲಿಯಮ್ಮನ್ 26 ಬೌಲ್ ಗಳಿಗೆ 41 ರನ್ ಗಳ ಬಿರುಸಿನ ಆಟವಾಡಿ ತಂಡ 150ರ ಗಡಿಯನ್ನು ದಾಟುವಂತೆ ಮಾಡಿದರು. ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು.

ಹೈದರಾಬಾದ್ ತಂಡ ಕೊಟ್ಟ ಗುರಿಯನ್ನು ಬೆನ್ನತ್ತಿ ಹೊರಟ ಡೆಲ್ಲಿ ಗುರಿಯನ್ನು ಮುಟ್ಟಲಿಲ್ಲ. ಡೆಲ್ಲಿ ತಂಡದ ಆರಂಭಿಕ ಆಟಗಾರರಾಗಿ ಪೃಥ್ವಿ.ಶಾ ಅವರು ಕೇವಲ 2 ರನ್ ಗಳಿಗೇ ಪೆವಿಲಿಯನ್ ಸೇರಿದರು. ಶಾ ನಂತರ ಬಂದ ಆಟಗಾರರಾದ ಶಿಖರ್ ಧವನ್ (31 ಎಸೆತಗಳಿಗೆ 34 ರನ್) ಹಾಗೂ ಎಸ್, ಐಯ್ಯರ್ (21 ಎಸೆತಗಳಿಗೆ 17 ರನ್) ಹಗುಉ ಆರ್. ಪಂತ್ (27 ಎಸೆತಗಳಿಗೆ 28 ರನ್ ಗಳಿಸಿ ತಂಡವನ್ನು ಉಳಿಸಲು ಪ್ರಯತ್ನಿಸಿದರಾದರೂ ಸಾಧ್ಯಗಲಿಲ್ಲ. ಹೈದರಾಬಾದ್ ತಂಡದ ಭುವನೇಶ್ವರ್ ಕುಮಾರ್ ಹಾಗೂ ರಶೀದ್ ಖಾನ್ ಅವರ ಬಿರುಸಿನ ಬೌಲಿಂಗ್ ದಾಳಿಯನ್ನು ಡೆಲ್ಲಿ ತಂಡದವರಿಂದ ತಡೆದುಕೊಳ್ಳಲಾಗಲಿಲ್ಲ.ತಂಡ 20 ಓವರ್ ಗಳಲ್ಲಿ ತಂಡ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.

ಹೈದರಾಬಾದ್ ತಂಡವು ಡೆಲ್ಲಿ ವಿರುದ್ಧ ಒಟ್ಟು 15 ರನ್ ಗಳ ಜಯವನ್ನು ಸಾಧಿಸಿತು.

Copyright © All rights reserved Newsnap | Newsever by AF themes.
error: Content is protected !!