February 22, 2026

Newsnap Kannada

The World at your finger tips!

election , JDS , Politics

Political retirement if HDK does not become CM - CM Ibrahim ಹೆಚ್​.ಡಿ.ಕೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ - ಸಿ.ಎಂ.ಇಬ್ರಾಹಿಂ

ಸಿದ್ದರಾಮಯ್ಯ ಟಿಪ್ಪು ಜಯಂತಿ ಕೇವಲ ರಾಜಕಾರಣಕ್ಕಾಗಿ ಮಾಡಿದ್ದು – ಸಿ ಎಂ ಇಬ್ರಾಹಿಂ

Spread the love

ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದ್ದು ಕೇವಲ ರಾಜಕಾರಣಕ್ಕಾಗಿ ಮಾಡಿದ್ದು ಎಂ ಎಲ್ ಸಿ ಸಿ ಎಂ ಇಬ್ರಾಹಿಂ ತುಮಕೂರಿನಲ್ಲಿ ಇಂದು ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ ನಾನು ಅಂದೇ ಜಯಂತಿ ವಿರೋಧಿಸಿದ್ದೆ. ಜಯಂತಿ ಆಚರಣೆ, ಪೋಟೋಗೆ ಹಾರ ಹಾಕಿ ಪೂಜೆ ಮಾಡುವ ಪದ್ದತಿ ನಮ್ಮಲ್ಲಿ ಇಲ್ಲ ಎಂದು ಹೇಳಿದ್ದನ್ನು ಈ ಸಿದ್ದರಾಮಯ್ಯ ಕೇಳಲಿಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂಮರಿಗೆ ಪ್ರಾತಿನಿಧ್ಯತೆ ಸಿಗುತ್ತಿಲ್ಲ ನಿಜ. ಕಾಂಗ್ರೆಸ್ ಮುಸ್ಲಿಂ ಅಭ್ಯಥಿ೯ಯನ್ನು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಒಂದು ವೇಳೆ ಪಕ್ಷ ಅಧಿಕರಕ್ಕೆ ಬಂದರೆ 30 ತಿಂಗಳು ಮುಸ್ಲಿಂಮರಿಗೆ ಉಳಿದ 30 ತಿಂಗಳು ಪರಿಶಿಷ್ಠರನ್ನು ಸಿಎಂ ಮಾಡುವ ಘೋಷಣೆ ಮಾಡಲಿ ಎಂದು ಹೇಳಿದರು.

error: Content is protected !!