February 22, 2026

Newsnap Kannada

The World at your finger tips!

thayi maga

ಕಾರಿನ ಟೈರ್ ಸ್ಫೋಟ – ತಾಯಿ ಮಗ ಸಾವು

Spread the love

ಟೈರ್ ಸ್ಫೋಟಗೊಂಡು ತಾಯಿ,ಮಗ ಕಾರಿನಲ್ಲಿಯೇ ಸಾವನ್ನಪ್ಪಿದ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ಬುಧವಾರ ನಡೆದಿದೆ.ದೈವಿಕ್(12), ಗುಣಲಕ್ಷ್ಮಿ(35) ಮೃತ ದುರ್ದೈವಿಗಳು.

ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ಕಾರಿನಲ್ಲಿ ಪತಿ ಜಗದೀಶ್ ಜೊತೆಗೆ ಗುಣಲಕ್ಷ್ಮಿ ಮತ್ತು ಮಗ ದೈವಿಕ್ ಹೋಗುತ್ತಿದ್ದರು.

ಇಂದು ಮುಂಜಾನೆ 4.30 ಸಮಯದಲ್ಲಿ ಕಾರಿನ ಮುಂಭಾಗದ ಟೈಯರ್ ಗಳು ಸ್ಫೋಟ ಆಗಿದೆ. ಈ ಪರಿಣಾಮ ಕಾರು ಕಂಬಕ್ಕೆ ಗುದ್ದಿದೆ. ಕಾರು ಓಡಿಸುತ್ತಿದ್ದ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ, ಗುಣಲಕ್ಷ್ಮಿ ಮತ್ತು ದೈವಿಕ್ ಮಾತ್ರ ಕಾರಿನಲ್ಲಿ ಮೃತಪಟ್ಟಿದ್ದಾರೆ.

error: Content is protected !!