February 22, 2026

Newsnap Kannada

The World at your finger tips!

waterspoil

ವಿಜಯನಗರ ಜಿಲ್ಲೆಯಲ್ಲಿ;ಕಲುಷಿತ ನೀರು ಸೇವನೆ – 6 ಮಂದಿ ಬಲಿ :ಊರು ಬಿಟ್ಟ ಗ್ರಾಮಸ್ಥರು..!

Spread the love

ನೂತನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 6 ಮಂದಿ ಬಲಿಯಾಗಿದ್ದಾರೆ

ಕಲುಷಿತ ನೀರಿನಿಂದಾಗಿ ಸರಣಿ ಸಾವು ಸಂಭವಿಸುತ್ತಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಹಲವು ಮಂದಿ ಸುರಕ್ಷಿತ ಸ್ಥಳಕ್ಕೆ ಹೋಗುತ್ತಿದ್ದಾರೆ. ಸರಣಿ ಸಾವಿನಿಂದ ಊರು ತೊರೆದು ಸಂಬಂಧಿಕರ ಮನೆಯನ್ನು ಸೇರಿದ್ದಾರೆ.

ಕಲುಷಿತ ನೀರಿನಿಂದ ಪ್ರಾಣ ಉಳಿಸಿಕೊಳ್ಳಲು 20 ವರ್ಷದೊಳಗಿನವರು ಊರಲ್ಲಿಲ್ಲ. ಅಕ್ಕ, ಪಕ್ಕದ ಸಂಬಂಧಿಕರ ಊರುಗಳಿಗೆ ತೆರಳಿದ್ದಾರೆ. ಜೀವ ಉಳಿದರೆ ಸಾಕು ಎಂದು ಊರು ಬಿಡುತ್ತಿದ್ದಾರೆ.

ಮಕರಬ್ಬಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಇಷ್ಟೆಲ್ಲ ಆದರೂ ಸರ್ಕಾರಿ ಅಧಿಕಾರಿಗಳು ಗ್ರಾಮಕ್ಕೆ ಮಾತ್ರ ಭೇಟಿ ನೀಡಿಲ್ಲ ಎನ್ನಲಾಗಿದೆ.

error: Content is protected !!