ತಾಲಿಬಾನ್‌ಗೂ ಆರ್‌ಎಸ್‌ಎಸ್‌ಗೂ ವ್ಯತ್ಯಾಸ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಸಿದ್ದರಾಮಯ್ಯಗೂ ಗೊತ್ತಿದೆ. ಆದರೆ ಕೆಣಕಬೇಕು, ಚುಚ್ಚಬೇಕು, ಅಪಹಾಸ್ಯ ಮಾಡಬೇಕೂಂತ ಅವರು (ಮಾಜಿ ಮುಖ್ಯಮಂತ್ರಿ) ಈ ರೀತಿ ಹೇಳುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸಚಿವರು ಮಾತನಾಡಿದರು. ದೇಶದ ಹಿತಕ್ಕಾಗಿ ಕೆಲಸ ಮಾಡಲು ಕಲಿಸುತ್ತೆ ಆರ್.ಎಸ್.ಎಸ್. ದೇಶದ ವಿಚಾರ ಬಂದಾಗ ವೈಯಕ್ತಿಕ ವಿಚಾರ ಬಲಿಕೊಟ್ಟು ರಾಷ್ಟ್ರದ ಸಂರಕ್ಷಣೆ ಮಾಡು ಎನ್ನತ್ತೆ ಅದು. ಈ ರೀತಿ ಹೇಳುವುದು ಆರ್‌ಎಸ್‌ಎಸ್ ಮಾತ್ರ. ಆದ್ದರಿಂದ ನಾವು ಅದನ್ನು ಪ್ರೀತಿಸುತ್ತೇವೆ. ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿ, ರಾಜ್ಯದ ಗೃಹಮಂತ್ರಿ ಎಲ್ಲರೂ ಆರ್‌ಎಸ್‌ಎಸ್‌ನಿಂದ ಬಂದವರೇ ಎಂದು ವಿವರಿಸಿದರು.
ಯಾರಿಗೆ ಮನುಷ್ಯತ್ವ ಇಲ್ಲ, ಯಾರಿಗೆ ಮನುಷ್ಯತ್ವ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಆರಗ ಜ್ಞಾನೇಂದ್ರ, ವಿರೋಧ ಪಕ್ಷದ ನಾಯಕನಿಗೆ ಮಾತಿನಿಂದಲೇ ತಿವಿದರು.
ಆರ್‌ಎಸ್‌ಎಸ್ ನವರದ್ದು ತಾಲಿಬಾನ್ ಸಂಸ್ಕೃತಿ. ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ಹೇಳಿದ್ದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಮುಡಾ ಹಗರಣ: ದಾಖಲೆ ಒದಗಿಸಿದವರಲ್ಲಿ ಕಾಂಗ್ರೆಸ್ ನಾಯಕರು ಸಹ ಇದ್ದರು – ಸ್ನೇಹಮಯಿ ಕೃಷ್ಣಾ