January 14, 2025

Newsnap Kannada

The World at your finger tips!

politics,oil,new

No sunflower, no peanut in sunflower and peanut oil: Shobha Karandlaje

ಕೇಂದ್ರದ ಕೃಷಿ ಬಿಲ್‌ನ ಲಾಭ-ನಷ್ಟದ ಚರ್ಚೆಯಾಗಲಿ: ಶೋಭಾ ಅಭಿಮತ

Spread the love

ಕೇಂದ್ರ ಸರ್ಕಾರದ ಕೃಷಿ ಬಿಲ್ ಕುರಿತ ಲಾಭ-ನಷ್ಟದ ಚರ್ಚೆಯಾಗಲಿ. ಹೋರಾಟಮಾಡುತ್ತಿರುವವರು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಕೇಂದ್ರದ ಕೃಷಿ, ರೈತ, ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.


ಸೆಪ್ಟೆಂಬರ್ 27 ರಂದು ರೈತ ಸಂಘಟನೆಗಳು ಕರೆದಿರುವ ಭಾರತ್ ಬಂದ್ ಕುರಿತು ಉಡುಪಿಯಲ್ಲಿ ವರದಿಗಾರರೊಂದಿಗೆ ಸಚಿವರು ಮಾತನಾಡಿದರು. ಬಿಲ್‌ನ ಸಾಧಕ-ಬಾಧಕ ಚರ್ಚಿಸದೆ ಅದು ಸರಿಯಿಲ್ಲ ಎಂದು ರೈತಪರ ಹೋರಾಟಗಾರರು ಹೇಗೆ ನಿರ್ಧರಿಸುತ್ತಾರೆ ಎಂದು ಪ್ರಶ್ನಿಸಿದರು.


ರೈತ ಹೋರಾಟಗಾರರ ಜತೆ 11 ಸುತ್ತಿನ ಚರ್ಚೆ ನಡೆದಿದೆ. ಮತ್ತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು. ಕೇಂದ್ರದ ಕೃಷಿ ಬಿಲ್ ಅನುಷ್ಠಾನಗೊಳಿಸಿದ ರಾಜ್ಯಗಳ ರೈತರಿಗೆ ಲಾಭವಾಗಿದೆ. ಹೋರಾಟ ಮಾಡುವವರು ಈ ವರದಿಯನ್ನು ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ರೈತರ ವಿಷಯದಲ್ಲಿ ರಾಜಕೀಯ ಬೇಡ. ದೇಶಕ್ಕೆ ಅನ್ನಕೊಡುವ ರೈತರೊಂದಿಗೆ ಚರ್ಚಿಸಲು ಸದಾಸಿದ್ಧ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!