ದಲಿತ ಮುಖ್ಯಮಂತ್ರಿ: ಕಾಂಗ್ರೆಸ್‌ ನ ಹೊಸ ಟ್ರಂಪ್ ಕಾರ್ಡ್- ಬಿಜೆಪಿ ಟೀಕೆ

Team Newsnap
1 Min Read

ದಲಿತರನ್ನು ರಾಜಕೀಯವಾಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷವು ಈಗ ಹೊಸ ಪ್ರಹಸನ ಆರಂಭಿಸಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ಪಂಜಾಬ್‌ನಲ್ಲಿ ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದೇವೆಂದು ಬೀಗುತ್ತಿರುವ ಕಾಂಗ್ರೆಸ್ ವರಿಷ್ಠರು ಕರ್ನಾಟಕದಲ್ಲಿ ದಲಿತ ನಾಯಕರನ್ನು ಮೂಲೆಗುಂಪು ಮಾಡಿ ಮೌನಕ್ಕೆ ಶರಣಾಗಿದೆ ಎಂದು ತನ್ನ ಸರಣಿ ಟ್ವೀಟ್‌ನಲ್ಲಿ ಛೇಡಿಸಿದೆ.

ಸಿಎಂ ಸ್ಥಾನಕ್ಕಾಗಿ ಹಗಲು ಕನಸು ಕಾಣುತ್ತಿರುವ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, ದಲಿತ ಸಿಎಂ ವಿಚಾರದಲ್ಲಿ ನಿಮ್ಮ ನಿಲುವೇನು ಎಂದು ಕೇಳಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ. ಜಿ. ಪರಮೇಶ್ವರ್ ಅವರ ರಾಜಕೀಯ ಜೀವನವನ್ನು ಮುಗಿಸಿದ ರೀತಿ ಕಾಂಗ್ರೆಸ್ ಪಕ್ಷದ ಅಂತರಾಳದಲ್ಲಿ ಹುಟ್ಟಿದ ದಲಿತ ಸಿಎಂ ವಾದದ ಭ್ರೂಣ ಹತ್ಯೆ ಮಾಡುತ್ತೀರಾ ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ ನಿಲುವೇನು ಎಂದು “ಕಮಲ’ಪಕ್ಷವು ಕೇಳಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರು ಪಂಜಾಬ್‌ನಲ್ಲಿ ಚರಣ್‌ಜಿತ್ ಅವರಿಗೆ ಪಟ್ಟಕಟ್ಟಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದೇವೆ ಎಂದು ಬೀಗುತ್ತಿದ್ದಾರೆ.

ಇವರ ದ್ವಿಮುಖ ನೀತಿಯ ಬಗ್ಗೆ ಏನೆನ್ನಬೇಕು ಎಂದಿದೆ.
ರಾಜ್ಯದಲ್ಲಿ ದಲಿತ ಸಿಎಂ ವಾದ ಬುಗಿಲೆದ್ದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ನಾನೇ ದಲಿತ ಪರವಾಗಿದ್ದೇನೆ. ಇನ್ಯಾಕೆ ದಲಿತ ಮುಖ್ಯಮಂತ್ರಿ ಎಂದು ಪ್ರಶ್ನಿಸಿದ್ದರು. ದಲಿತ ಮುಖ್ಯಮಂತ್ರಿ ವಾದಕ್ಕೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ದೊಡ್ಡ ಅಡ್ಡಿಯಾರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ ಎಂದು “ದಲಿತ ವಿರೋಧಿ ಕಾಂಗ್ರೆಸ್” ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಬಿಜೆಪಿ ಟ್ಟೀಟ್ ಮಾಡಿದೆ.

“ನನಗೆ ತಳ ಸಮುದಾಯದ ನೋವು ಗೊತ್ತು. ನಾನೇ ದಲಿತ ಎಂದು, ದಲಿತ ಸಿಎಂ ವಾದದ ವಿರುದ್ಧ ಸಿದ್ದರಾಮಯ್ಯ ದಾಳ ಉರುಳಿಸಿದ್ದರು. ತಮ್ಮ ಮಿತ್ರಮಂಡಳಿಯ ಸಾಹಿತಿಗಳಿಂದಲೂ ದಲಿತ ಸಿಎಂ ಅಗತ್ಯವಿಲ್ಲ ಎಂದು ಹೇಳಿಕೆ ಕೊಡಿಸಿದ್ದರು ಎಂದು ಬಿಜೆಪಿ ಹೇಳಿದೆ.

Share This Article
Leave a comment