January 4, 2025

Newsnap Kannada

The World at your finger tips!

ka sa pa

ಕಸಾಪ ಅಧ್ಯಕ್ಷರ ಚುನಾವಣೆಗೆ ಧಾರವಾಡ ಹೈಕೋರ್ಟ್ ಪೀಠ ಎರಡು ತಿಂಗಳು ಗಡುವು ?

Spread the love

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆಯನ್ನು ಎರಡು ತಿಂಗಳ ಒಳಗಡೆ ಮಾಡುವಂತೆ ಹೈಕೋರ್ಟ್ ತಾಕೀತು ಮಾಡಿ, ಗಡುವಿನ‌ ಆದೇಶ ಮಾಡಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು ಸರ್ಕಾರಕ್ಕೆ ಹಾಗೂ ಚುನಾವಣಾಧಿಕಾರಿಗೆ ಈ ಕುರಿತಂತೆ ಸ್ಪಷ್ಟ ಆದೇಶ ಮಾಡಿದೆ.

ನ್ಯಾಯಾಲಯದ ಆದೇಶದಂತೆ ಅಕ್ಟೋಬರ್ ಕೊನೆಯ ವಾರ ಅಥವಾ ನವಂಬರ್ ಮೊದಲನೇ ವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

ಹೈಕೋರ್ಟ್ ನ ತೀರ್ಪಿನ ಆದೇಶದ ಪ್ರತಿ ತಲುಪಿದ ನಂತರ, ಆದೇಶದಲ್ಲಿ ರುವ ಸಂಗತಿ ಅರಿತು, ಈ ಕುರಿತಂತೆ ನಿರ್ಧಾರ ಕೈಗೊಳ್ಳಲು ಕಸಾಪ ಆಡಳಿತಾಧಿಕಾರಿಗಳು ಬಯಸಿದ್ದಾರೆಂದು ಮೂಲಗಳು ಹೇಳಿವೆ.‌

ಧಾರವಾಡ ಹೈಕೋರ್ಟ್ ನ ತೀರ್ಪಿನ ನಂತರ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿ, ಬಿರುಸಿನ ಪ್ರಚಾರ ಆರಂಭಿಸಿ ಬಿಟ್ಟಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!