January 1, 2025

Newsnap Kannada

The World at your finger tips!

u t kadar

UT Khader is the new Speaker - Unanimous choice ಯು.ಟಿ ಖಾದರ್ ನೂತನ ಸ್ಪೀಕರ್ - ಸರ್ವಾನುಮತದ ಆಯ್ಕೆ

ದೊಡ್ಡ, ದೊಡ್ಡವರಿಗೆ ಬಿಜೆಪಿ ಸರ್ಕಾರ ಅಕ್ರಮ ಜಾಗ ಸಕ್ರಮ ಮಾಡಿಕೊಟ್ಟಿಲ್ವಾ: ಖಾದರ್ ಪ್ರಶ್ನೆ

Spread the love

ಅಕ್ರಮ ಜಾಗವನ್ನು ಬಿಜೆಪಿ ಸರ್ಕಾರ ದೊಡ್ಡ, ದೊಡ್ಡವರಿಗೆ ಸಕ್ರಮ ಮಾಡಿಕೊಟ್ಟಿಲ್ಲವಾ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಯು.ಟಿ.ಖಾದರ್, ದೇವಸ್ಥಾನದ ಜಾಗ ಸಕ್ರಮ ಮಾಡಲು ಸರ್ಕಾರಕ್ಕೆ ತೊಂದರೆ ಏನು ಎಂದು ಕೇಳಿದ್ದಾರೆ.


ಮಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು, ಆದೇಶ ಕೊಡುವಾಗ ಸರ್ಕಾರ ಏಕೆ ಯೋಚನೆ ಮಾಡಿಲ್ಲ ಎಂದರು. ಈ ಬಗ್ಗೆ ಕೂತು ಚರ್ಚೆನಡೆಸಿದ್ದರೆ ಪರಿಹಾರ ಸಿಗುತ್ತಾ ಇರಲಿಲ್ಲವಾ ಎಂದಿದ್ದಾರೆ.


ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ತೆರವು ಸಂಬಂಧ ಉದ್ಭವಿಸಿದ ವಿವಾದದ ಬಗ್ಗೆ ಖಾದರ್ ಪ್ರತಿಕ್ರಿಯಿಸಿ, ಮೈಸೂರು ಅಷ್ಟೇ ಅಲ್ಲ, ಇದು ಇಡೀ ದೇಶಕ್ಕೆ ದೊಡ್ಡಕಪ್ಪು ಚುಕ್ಕೆ. ಇದರ ನೈತಿಕ ಜವಾಬ್ದಾರಿ ಹೊತ್ತು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.


ದೇವಸ್ಥಾನ ಕೆಡವಿದ್ದರ ಬಗ್ಗೆ ಯಾರನ್ನು ಸರ್ಕಾರ ಜವಾಬ್ದಾರಿ ಮಾಡುತ್ತೆ? ದೇವಸ್ಥಾನದ ಇತಿಹಾಸ, ಅಲ್ಲಿನ ಶಿಲ್ಪಕಲೆಗಳ ಕುರಿತು ಅವರಿಗೆ (ಬಿಜೆಪಿಯವರಿಗೆ) ಗೊತ್ತಾಗಿಲ್ವಾ ಎಂದು ಪ್ರಶ್ನಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!