December 20, 2024

Newsnap Kannada

The World at your finger tips!

niraj fm

ಕನಸು-ನನಸು ಮಾಡಿಕೊಂಡ ‘ಚಿನ್ನದ ಹುಡುಗ’

Spread the love

“ಚಿನ್ನದ ಹುಡುಗ’ ನೀರಜ್ ಚೋಪ್ರಾ ತನ್ನ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಅವರೇ ಹೇಳಿಕೊಂಡಂತೆ ಅದೊಂದು ಸಣ್ಣಕನಸು.

niraj flight


ಏನಪ್ಪ ಅದು ಅಂದ್ರೆ, ತಮಗೆ ಜನ್ಮನೀಡಿದ ತಂದೆ-ತಾಯಿಯನ್ನು ತಮ್ಮ ಜೀವಮಾನದಲ್ಲಿ ಒಮ್ಮೆಯಾದರು ವಿಮಾನ ಪ್ರಯಾಣ ಮಾಡಿಸಬೇಕು ಎಂದು ಅಂದುಕೊಂಡಿದ್ದರು. ಹಿರಿಯರು ಹೇಳುವಂತೆ, ಎಲ್ಲದಕ್ಕೂ ಸಮಯದ ಬರಬೇಕು ಅಂತ. ನೀರಜ್ ಅಂದುಕೊಂಡಿದ್ದು ಇಂದು ಕಾರ್ಯರೂಪಕ್ಕೆ ಬಂತು.


ಟೋಕಿಯೊ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದುಕೊಂಡ 23 ವರ್ಷದ ನೀರಜ್, ಈಗ ತಮ್ಮ ತಂದೆ-ತಾಯಿಯ “ಗಗನಯಾತ್ರೆ’ಯನ್ನೂ ಮಾಡಿಸಿದ್ದಾರೆ. ಪ್ರೀತಿಯ ಅಪ್ಪ-ಅಮ್ಮನೊಂದಿಗೆ ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಸಣ್ಣ ಕನಸು ಈಗ ನನಸಾಗಿದೆ ಎಂದು ಬರೆದುಕೊಂಡಿದ್ದಾರೆ.


ಚಿನ್ನದಪದಕ ಪಡೆದಾಗ ಎಷ್ಟು ಸಂತಸಪಟ್ಟರೊ ಅದಕ್ಕಿಂತ ಹೆಚ್ಚು ಸಂತೋಷ ನೀರಜ್‌ಗೆ ಈಗ ಆಗಿರಬಹುದು ಎಂಬುದು ಅವರ ಅಭಿಮಾನಿಗಳ ಅನಿಸಿಕೆ.

Copyright © All rights reserved Newsnap | Newsever by AF themes.
error: Content is protected !!