January 8, 2025

Newsnap Kannada

The World at your finger tips!

thali3

25 ಸಾವಿರ ಆಫ್ಘನ್ ವಲಸಿಗರಿಗೆ ಅಮೆರಿಕದಲ್ಲಿ ವ್ಯವಸ್ಥೆ

Spread the love

ಅಮೆರಿಕದ ಏಳು ಸೇನಾ ನೆಲೆಗಳಲ್ಲಿ ಶುಕ್ರವಾರದತನಕ 25 ಸಾವಿರಕ್ಕೂ ಹೆಚ್ಚು ಆಫ್ಘನ್ ವಲಸಿಗರಿಗಾಗಿ ವಸತಿ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ವಾಯು ಪಡೆಯ ನಾರ್ದರ್ನ್ಕಮಾಂಡ್ ಮುಖ್ಯಸ್ಥ ಜನರಲ್ ಗ್ಲೆನ್ ವ್ಯಾನ್‌ಹೆರ್ಕ್ ತಿಳಿಸಿದ್ದಾರೆ

ಈ ಜನರಿಗಾಗಿ ಎಂಟು ಸಣ್ಣ ನಗರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೊಂದು ಸವಾಲಿನ ಕೆಲಸವೂ ಆಗಿದೆ. ಈ ನಗರಗಳಲ್ಲಿ ವಸತಿ ಜತೆಗೆ ಆಹಾರದ ಸೌಲಭ್ಯ ನೀಡಲಾಗುತ್ತೆ ಎಂದಿದ್ದಾರೆ.‌

ಈ ಸ್ಥಳದ ಉಸ್ತುವಾರಿಗೆ ಒಬ್ಬ ಸೇನಾ ಅಧಿಕಾರಿಯನ್ನು “ಮೇಯರ್’ ಆಗಿ ನಿಯೋಜಿಸಲಾಗಿದೆ. ಸಂವಹನ ಮತ್ತು ಇತರ ಅಗತ್ಯ ಕಾರ್ಯಗಳಿಗೆ ಆಫ್ಗನ್ ನಾಯಕರೊಬ್ಬರು ನಿಯೋಜಿತ ಮೇಯರ್‌ಗೆ ಸಹಾಯ ಮಾಡುವರು ಎಂದು ಜ. ವ್ಯಾನ್‌ಹೆರ್ಕ್ ವಿವರಿಸಿದ್ದಾರೆ.

ಅಮೆರಿಕಕ್ಕೆ ಬರುತ್ತಿರುವ ಆಫ್ಘನ್ ವಲಸಿಗರ ಸಂಖ್ಯೆ ಏರಿಕೆಯಾಗುತ್ತಿದಂತೆ ಭಾಷೆ, ಸಂಸ್ಕೃತಿ ಇತರ ಕಾರಣಗಳೂ ನೆರವಿನ ಕೆಲಸಕ್ಕೆ ಅಡಚಣೆಯಾಗುತ್ತಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!