February 26, 2026

Newsnap Kannada

The World at your finger tips!

vidansoudha

ನೋ ವ್ಯಾಕ್ಸಿನೇನ್, ನೋ ರೇಷನ್ ಎಂಬ ನಿರ್ಧಾರ ಕೈ ಬಿಡಿ- ಡಿಸಿಗಳಿಗೆ ಸರ್ಕಾರದ ಸೂಚನೆ

Spread the love

ನೋ ವ್ಯಾಕ್ಸಿನೇನ್, ನೋ ರೇಷನ್ ಎಂಬ ನಿರ್ಧಾರ ಕೈ ಬಿಡಿ ಎಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.

no vacin

ಕೊರೊನಾ ವ್ಯಾಕ್ಸಿನೇಷನ್​ಗೆ ವೇಗ ನೀಡಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿದ್ದ ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತಂದರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ವ್ಯಾಕ್ಷಿನ್ ಪ್ರಮಾಣಪತ್ರ ಇದ್ದರೆ ಮಾತ್ರ ರೇಷನ್, ಮಾಶಾಸನ ಪಾವತಿ ಮಾಡುವಂತೆ ಎಲ್ಲಾ ಬ್ಯಾಂಕ್​ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

ಮಾಧ್ಯಮಗಳ ವರದಿ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರದಿಂದ ಇಂತಹ ಯಾವುದೇ ಸೂಚನೆಗಳು ನಮಗೆ ಬಂದಿಲ್ಲ. ಲಸಿಕೆ ಪಡೆದವರಿಗೆ ಮಾತ್ರ ರೇಷನ್, ಪಿಂಚಣಿ ಅನ್ನೋದಿಲ್ಲ. ಅಂತಹ ಯಾವುದೇ ಸೂಚನೆಯನ್ನು ಸರ್ಕಾರದಿಂದ ಯಾರಿಗೂ‌ ಕೊಟ್ಟಿಲ್ಲ. ಆ ರೀತಿ ನಿರ್ಧಾರಗಳನ್ನು ಕೈಗೊಂಡಿದ್ದರೆ ಕೂಡಲೇ ಕೈಬಿಡಬೇಕು ಅಂತಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ತಿಳಿಸಿದೆ.

error: Content is protected !!