ಹಿಂದಿ ಕಿರುತೆರೆಯ ಸ್ಟಾರ್ ನಟ, ಬಿಗ್ಬಾಸ್ ಸೀಸನ್ 13 ವಿನ್ನರ್ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.
ಸಿದ್ದಾರ್ಥ್ (40) ಶುಕ್ಲಾ ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಬಾಲಿಕಾ ವಧು ಸೀರಿಯಲ್ ಸಿದ್ದಾರ್ಥ್ ಶುಕ್ಲಾಗೆ ಸಾಕಷ್ಟು ಫೇಮ್ ತಂದುಕೊಟ್ಟಿತ್ತು.
ಸಿದ್ದಾರ್ಥ್ ಶುಕ್ಲಾ ಇವತ್ತು ಬೆಳಗ್ಗೆ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಬರಸಿಡಿಲಿನಂತೆ ಬಡಿದುಬಿಟ್ಟಿದೆ. ಇಡೀ ಬಾಲಿವುಡ್ ಕಿರುತೆರೆ ಕಣ್ಣೀರಿಡ್ತಿದೆ.
ದಿಲ್ ಸೆ ದಿಲ್ ತಕ್ ಶೋನಲ್ಲೂ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಬಿಗ್ಬಾಸ್ ಸೀಸನ್ 13 ರಲ್ಲಿ ಭಾಗಿಯಾದ ಸಿದ್ದಾರ್ಥ್ ಟ್ರೋಫಿಯನ್ನೂ ಗೆದ್ದಿದ್ದರು.
ಶುಕ್ಲಾ ಹಾಗೂ ಶೆಹನಾಜ್ ಗಿಲ್ ಜೋಡಿ ಬಿಗ್ಬಾಸ್ ಸೀಸನ್ 13ರಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಶೋ ಮುಗಿದು 2 ವರ್ಷವಾದ್ರೂ ಅವರಿಬ್ಬರ ಸ್ನೇಹ ಕಡಿಮೆಯಾಗಿರಲಿಲ್ಲ.
ಕಳೆದ ವಾರವಷ್ಟೇ ಖಾಸಗಿ ವಾಹಿನಿಯ ಡ್ಯಾನ್ಸ್ ದಿವಾನೆ ಶೋನಲ್ಲೂ ಸಿದ್ದಾರ್ಥ್ ಶುಕ್ಲಾ ಮತ್ತು ಶೆಹನಾಜ್ ಗಿಲ್ ಭಾಗಿಯಾಗಿದ್ದರು. ಓಟಿಟಿ ಫ್ಲಾಟ್ಫಾರ್ಮ್ನಲ್ಲಿ ಬರುತ್ತಿರುವ ಬಿಗ್ಬಾಸ್ ಶೋನಲ್ಲೂ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು.
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್
- ರೇವಣ್ಣ ಅಪಹರಣ ಕೇಸ್ : ಎಸ್ಐಟಿ ವಿಶೇಷ ತಂಡದಿಂದ 40 ಕಡೆ ರೇಡ್
- ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ