ದುಬೈನ್ ಅಲ್ ಶೇಕ್ ಝಹೇಜ್ ಕ್ರೀಡಂಗಣದಲ್ಲಿ ಇಂದು ನಡೆದ ಐಪಿಎಲ್ ನ 13ನೇ ಸರಣಿಯ 5ನೇ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 49 ರನ್ ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಡಿ. ಕಾರ್ತಿಕ್ ಅವರು ದೊಡ್ಡ ನಷ್ಟವನ್ನೇ ಅನುಭವಿಸಬೇಕಾಯಿತು. ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರಾಗಿ ತಂಡದ ನಾಯಕ ರೋಹಿತ್ ಶರ್ಮಾ ಅವರು ಫೀಲ್ಡಿಗಿಳಿದು ರನ್ ಗಳ ಮಳೇಯನ್ನೇ ಕರೆದರು. ಅವರು 54 ಬಾಲ್ ಗಳಲ್ಲಿ ಒಟ್ಟು 80 ರನ್ ಮೊತ್ತದ ಕೊಡುಗೆಯನ್ನು ತಂಡಕ್ಕೆ ನೀಡಿದರು. ಶತಕದ ಹೊಸ್ತಿಲಿಗೆ ಹತ್ತಿರವಿರುವಾಗಲೇ ಶಿವಮ್ ಮಾವಿ ಅವರ ಬಾಲ್ ಗೆ ಔಟಾದರು. ನಂತರ ಮೈದಾನಕ್ಕಿಳಿದ ಎಸ್. ಯಾದವ್ ಅವರು 28 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ತಂಡವನ್ನು ಸುಭದ್ರ ನೆಲೆಗೆ ತಂದರು. ಕೆಲವು ಹೊತ್ತು ಶಿವಮ್ ಮಾವಿ ಮತ್ತು ಸುನಿಲ್ ನರೈನ್ ಅವರ ಬೌಲಿಂಗ್ ಮುಂಬೈ ತಂಡದವರನ್ನು ಕಂಗಾಲಾಗಿಸಿದ್ದಂತೂ ಸುಳ್ಳಲ್ಲ. ಒಟ್ಟು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳನ್ನು ತಂಡ ಗಳಿಸಿತು.
ಇತ್ತಕಡೆ ಕೋಲ್ಕತ್ತ ನೈಟ್ ರೈಡರ್ಸ್ ಗಳ ಆರಂಭವೇ ಇವತ್ತು ಸರಿಯಿರಲಿಲ್ಲ. ಆಟದ ಪ್ರಾರಂಭದಲ್ಲೇ ಎಸ್. ಗಿಲ್ (7 ರನ್) ಮತ್ತು ನರೈನ್ (9 ರನ್) ಪೆವಿಲಿಯನ್ ಸೇರಿದರು. ಈ ಇಬ್ಬರೂ ಆಟದ ಮೊದಲ ಓವರ್ ನಲ್ಲಿ ಒಂದೇ ಒಂದು ರನ್ ಸಹ ಗಳಿಸಿರಲಿಲ್ಲ. ಹಾಗೂ ಹೀಗೂ ಕಷ್ಟಪಟ್ಟು ತಂಡಕ್ಕೆ ರನ್ ತಂದು ಕೊಡಲು ತುಂಬಾ ಪ್ರಯತ್ನ ಮಾಡಿದವರೆಂದರೆ ನೈಟ್ ರೈಡರ್ಸ್ ತಂಡದ ನಾಯಕ ಡಿ. ಕಾರ್ತಿಕ್ ( 23 ಎಸೆತಗಳಲ್ಲಿ 3ಒ ರನ್), ಎಸ್. ರಾಣಾ (18 ಎಸೆತಗಳಲ್ಲಿ 24 ರನ್) ಪಿ. ಕಮ್ಮಿನ್ಸ್ (12 ಎಸೆತಗಳಲ್ಲಿ 33 ರನ್) ಗಳಿಸಲು ಕಷ್ಟಪಟ್ಟರು. ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸ್ ಹಾಗೂ ರಾಹುಲ್ ಚಹರ್ ಅವರ ಬೌಲಿಂಗ್ ನೈಟ್ ರೈಡರ್ಸ್ ಗಳ ಶಕ್ತಿಯನ್ನು ಪೂರ್ಣವಾಗಿ ಕುಂದಿಸಿತು.
ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಮುಂಬೈ ತಂಡ ಇಂದು ಸರಿಯಾದ ತಂತ್ರ ಮಾಡಿ ಜಯದ ಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ