ನಿರಂಜನ ಮಠದ ಸಮಸ್ಯೆ ಪರಿಹರಿಸಿ: ಸ್ವಾಮೀಜಿ ಒತ್ತಾಯ

Team Newsnap
1 Min Read

ಮೈಸೂರಿನ ನಿರಂಜನ ಮಠದ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು ಎಂದು ಗದಗದ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.


ಮೈಸೂರಿನ ನಿರಂಜನ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವತಿಯಿಂದ ಗುರುವಾರ ನಡೆದ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು. ಯಾವುದೇ ಕಾರಣಕ್ಕೂ ಮಠದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ಬಿಡುವುದಿಲ್ಲ ಎಂದರು.


ವಿವೇಕ ಸ್ಮಾರಕ ನಿರ್ಮಿಸಲು ನಮ್ಮ ತಕರಾರಿಲ್ಲ. ಆದರೆ ನಿರಂಜನ ಮಠದ ಆಸ್ತಿ ಕಬ್ಜ ಮಾಡುವ ದುಸ್ಸಾಹಸಕ್ಕೆ ಕೈಹಾಕಬಾರದೆಂದರು. ಈ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರ ಹಾಗೂ ಈ ಜಾಗ ಅತಿಕ್ರಮಿಸಲು ಯತ್ನಿಸುತ್ತಿರುವವರಿಗೆ ಕುತ್ತು ಬರುತ್ತದೆ ಎಂದು ಎಚ್ಚರಿಸಿದರು. ಬೇರೆಯರವ ಜಾಗದಲ್ಲಿ ಹಕ್ಕು ಸಾಧಿಸುವುದನ್ನು ಸಹಿಸಲು ಸಾಧ್ಯ ಇಲ್ಲ. ಸಮುದಾಯದವರು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಡಿಸಿ ಕಚೇರಿ ತನಕ ಮೆರವಣಿಗೆ ಕೈಗೊಳ್ಳಬೇಕು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೆಣ್ಣು ಮಕ್ಕಳು ಪೊರಕೆ ಹಿಡಿದು ಮೆರವಣಿಗೆ ಮಾಡಬೇಕು ಎಂದು ಸಲಹೆ ನೀಡಿದರು.


ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ನಿರಂಜನ ಮಠವನ್ನು ಮಠವಾಗಿಯೇ ಉಳಿಸಬೇಕೆಂದು ಒತ್ತಾಯಿಸಿದರು.


ಹುಣಸೂರು ತಾಲೂಕಿನ ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಬೆಟ್ಟದಪುರದ ಸಲಿಲಾಖ್ಯ ವಿರಕ್ತ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.

Share This Article
Leave a comment