December 23, 2024

Newsnap Kannada

The World at your finger tips!

election , vote , police

Voting for state assembly tomorrow: 1.56 lakh police personnel in charge ನಾಳೆ ರಾಜ್ಯ ವಿಧಾನಸಭೆಗೆ ಮತದಾನ : 1.56 ಲಕ್ಷ ಪೊಲೀಸ್ ಸಿಬ್ಬಂದಿಗಳ ಉಸ್ತುವಾರಿ

ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಶಂಕಿತ ಮೂವರು ಪೋಲಿಸ್ ವಶಕ್ಕೆ

Spread the love

ಕಳೆದ ಮಂಗಳವಾರ ರಾತ್ರಿ ಮೈಸೂರಿನ ಲಲಿತಾದ್ರಿಪುರ ಬಡಾವಣೆಯಲ್ಲಿ ನಡೆದ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕೃತ್ಯವೆಸಗಿದ ಸ್ಥಳದಲ್ಲಿ ದುಷ್ಕರ್ಮಿಗಳು ಮದ್ಯ ಸೇವನೆ ಮಾಡಿದ್ದರು. ಹೀಗಾಗಿ ಪೊಲೀಸರು ವೈನ್ ಶಾಪ್​ಗಳ ಜಾಡುಹಿಡಿದಿದ್ದಾರಂತೆ.

ಆಲನಹಳ್ಳಿಯ ವೈನ್ಸ್ ಶಾಪ್​ನಲ್ಲಿ ಮದ್ಯ ಖರೀದಿಸಿದ್ದ ದೃಶ್ಯದ ಆಧಾರದ ಮೇಲೆ ಪೊಲೀಸರು ಸದ್ಯ ಮೂವರು ಶಂಕಿತರನ್ನು ಬಂಧಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಹತ್ತಕ್ಕೂ ಹೆಚ್ಚು ತನಿಖಾ ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಇಂದು ಗೃಹ ಸಚಿವರು ಹಾಗೂ ಮಹಿಳಾ ಆಯೋಗದ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!