January 12, 2025

Newsnap Kannada

The World at your finger tips!

katil 1

ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರನ್ನು ಬಿಟ್ಟು ತಾಲಿಬಾನರನ್ನು ಕರೆ ತರುತ್ತಿದ್ದರು – ಕಟೀಲ್

Spread the love

ಇಂದು ಜಗತ್ತು ಭಾರತದ ಕಡೆ ನೋಡುತ್ತಿದೆ. ಅಫ್ಘಾನಿಸ್ಥಾನದ ಬಗ್ಗೆ ಮಾತಾಡುತ್ತಾರೆ. ಈಗ ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರ ಬದಲಿಗೆ, ತಾಲಿಬಾನರನ್ನು ಕರೆತರುತ್ತಿತ್ತು‌ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ‌ಕಟೀಲ್ ಬುಧವಾರ ಕುಟುಕಿದರು.‌

ಮಂಡ್ಯದ ಸಮಾರವಿ‌ ಕನ್ವೆನ್ಷನ್ ಹಾಲ್ ಆರಂಭವಾದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಕಟೀಲ್
ನಮ್ಮ ದೇಶದಲ್ಲಿ ಮೋದಿ‌ ನೇತ್ರತ್ವದ ಎನ್ ಡಿಎ ಸರ್ಕಾರಕ್ಕೆ ಆಡಳಿತ ನಡೆಸುವುದರಿಂದ ಮೋದಿಯವರು ಆಫ್ಘನ್ ನಲ್ಲಿರುವ ಭಾರತೀಯರನ್ನು ಮಾತ್ರ ಕರೆತಂದು
ಆ ಮೂಲಕ ತಾಲಿಬಾನಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ‌ ಎಂದರು.‌

ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಲ್ಲ:

ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿ ಮಾತನಾಡಿ ನಮ್ಮ ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಲ್ಲ.
ಯಾರೇ ಅಕ್ರಮ ಗಣಿಗಾರಿಕೆಯಲ್ಲಿ ದ್ದರೂ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಮಂಡ್ಯ ಪರಿವರ್ತನೆಗೆ ನಾಂದಿ ಹಾಡಿರುವ ಜಿಲ್ಲೆ. ಇಲ್ಲಿಂದಲೇ ಪರಿವರ್ತನೆ ಗಾಳಿ ಬೀಸುವ ಕಾರ್ಯ ಆರಂಭ ಮಾಡುತ್ತೇವೆ. ಜಿಲ್ಲೆಯಲ್ಲಿ ಗೂಂಡಾಗಿರಿ, ಜಾತಿ, ಕುಟುಂಬ ರಾಜಕಾರಣವನ್ನು ನೋಡಿದ್ದೇವೆ.
ಅದಕ್ಕೆಲ್ಲ ಅಂತ್ಯಹಾಡಲು ಇಂದಿನ ಸಭೆಯಲ್ಲಿ ಸಂಕಲ್ಪ ಮಾಡಲಿದೆ ಎಂದರು.

ಮೈಷುಗರ್ ಆರಂಭಕ್ಕೆ ಬೆಂಬಲ :

ಮಾಜಿ‌ಸಿಎಂ ಯಡಿಯೂರಪ್ಪ ನವರು ಮೈಷುಗರ್ ಗೆ ಸಾಕಷ್ಟು ಅನುದಾನ ಕೊಟ್ಟಿದ್ದರು. ಮೈಷುಗರ್ ಕಾರ್ಯಾರಂಭಕ್ಕೆ ಎಲ್ಲಾ ರೀತಿಯ ನೆರವು.ರೈತರಿಗೆ ಉಪಯೋಗ ವಾಗುವ ರೀತಿಯಲ್ಲಿ ಮೈಷುಗರ್ ಆರಂಭ.ಮಂಡ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದರು.

ಇದೀಗ 3 ಪಾಲಿಕೆಗಳಿಗೆ ಚುನಾವಣೆ ಇದೆ. ಮೂರರಲ್ಲೂ ಬಿಜೆಪಿ ಗೆಲ್ಲುತ್ತೆ.
ಆ ಮೂಲಕ ರಾಜ್ಯಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ ಎಂದರು.‌

ಕಾಂಗ್ರೆಸ್ ಪಕ್ಷದಲ್ಲಿ ಈಗಲೇ ಮುಂದಿನ ಸಿಎಂ ಯಾರೆಂಬ ಚರ್ಚೆ, ಕಚ್ಚಾಡ ನಡೆಯುತ್ತಿದೆ. ಆದರೆ ಮುಂದಿನ 20 ವರ್ಷ ಬಿಜೆಪಿ ಸರ್ಕಾರ ಇರುತ್ತದೆ. ಇದು ಸಿದ್ದುಗೆ, ಡಿಕೆಶಿಗೆ ಗೊತ್ತಿಲ್ಲ ಕಟೀಲ್ ಟಾಂಗ್ ನೀಡಿದರು.

ಬಿಜೆಯಲ್ಲಿ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಗಾದಿಗಾಗಿ ಈಗಲೇ ರೇಸ್ ಶುರುವಾಗಿದೆ. ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಒಂದೇ ದಾರಿಯಲ್ಲಿ ಹೋಗುತ್ತೇವೆ ಎಂದರು.

Copyright © All rights reserved Newsnap | Newsever by AF themes.
error: Content is protected !!