ಮೂವರು ದರೋಡೆಕೋರರು ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಗೆ ದಾಳಿ ಮಾಡಿ ಚಿನ್ನಾಭರಣ ದೋಚಿದ್ದಾರೆ. ಅವರನ್ನು ತಡೆಯಲು ಬಂದ ಯುವಕನಿಗೆ ಗುಂಡೇಟು ಹೊಡೆದು ಪರಾರಿಯಾದ ಘಟನೆ ಸೋಮವಾರ ಜರುಗಿದೆ.
ಮೂವರು ದರೋಡೆಕೋರರ ತಂಡ ಬೈಕ್ ನಲ್ಲಿ ಬಂದು ದಿಢೀರ್ ಚಿನ್ನ, ಬೆಳ್ಳಿ ಅಂಗಡಿಗೆ ನುಗ್ಗಿ ಆಭರಣ ಕಳ್ಳತನ ಮುಂದಾಗಿದ್ದಾರೆ.
ಈ ವೇಳೆ ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರ ಅವರನ್ನು ತಡೆಯಲು ಮುಂದಾಗಿದ್ದಾನೆ. ಆಗ ಧರ್ಮೇಂದ್ರನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ಏಟಿಗೆ ಆತ ಅಂಗಡಿಯಲ್ಲೆ ಕುಸಿದು ಬಿದ್ದಿದ್ದಾನೆ.
ಚಿನ್ನದ ಅಂಗಡಿಯಿಂದ ಹೋಗುವಾಗ ರಸ್ತೆಯಲ್ಲಿ ಈ ದೃಷ್ಯ ಕಂಡು ದರೋಡೆಕೋರರನ್ನು ತಡೆಯಲು ಮುಂದಾದ ದಡದಹಳ್ಳಿ ಗ್ರಾಮದ ಚಂದ್ರು ಮೇಲೆ ಕೂಡ ಶೂಟ್ ಔಟ್ ಮಾಡಿದ್ದಾರೆ.
ಗುಂಡಿನ ದಾಳಿಯಿಂದಾಗಿ ಆತನ ತಲೆ ಸೀಳಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಧರ್ಮೇಂದ್ರಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಶೂಟ್ ಔಟ್ ಪ್ರಕರಣದಿಂದಾಗಿ ಮೈಸೂರಿನ ಜನರು ಬೆಚ್ಚಿ ಬಿದ್ದಿದ್ದಾರೆ.
- ಫಾಸ್ಟ್ಯಾಗ್ ಬಳಕೆದಾರರ ಗಮನಕ್ಕೆ: ನಾಳೆಯಿಂದ ಹೊಸ ನಿಯಮ ಜಾರಿ
- ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ: 18 ಭಕ್ತರ ಸಾವು, 20ಕ್ಕೂ ಹೆಚ್ಚು ಮಂದಿ ಗಾಯ
- ಕಾಲೆಳೆಯುವವರು ಇರಲಿ
- ಇಬ್ಬಂದಿ
- ಮುತ್ತತ್ತಿ ಕ್ಷೇತ್ರದಲ್ಲಿ ದುರಂತ: ದೇವರ ದರ್ಶನಕ್ಕೆ ಬಂದಿದ್ದ ಇಬ್ಬರು ಮಹಿಳೆಯರು ನೀರುಪಾಲು
More Stories
ಮುತ್ತತ್ತಿ ಕ್ಷೇತ್ರದಲ್ಲಿ ದುರಂತ: ದೇವರ ದರ್ಶನಕ್ಕೆ ಬಂದಿದ್ದ ಇಬ್ಬರು ಮಹಿಳೆಯರು ನೀರುಪಾಲು
ಸರ್ವೆಯರ್ ಆತ್ಮಹತ್ಯೆ ಪ್ರಕರಣ – ಹನಿಟ್ರ್ಯಾಪ್ ಗೆ ಬಲಿ ?
ಕೊಡಗಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನದಿಗೆ ಹಾರಿ ಆತ್ಮಹತ್ಯೆ