ಗೃಹಸ್ಥಾಶ್ರಮಕ್ಕೆ ಬಂದರೂ ಲವರ್ ನೆನಪು ಮರೆಯದ ಪತಿರಾಯನೊಬ್ಬ ತನ್ನ ಪತ್ನಿಗೆ ಬೇರೆ ಮದುವೆಯಾಗು ಎಂದು ಒತ್ತಾಯಿಸಿರುವ ಅಪರೂಪದ ಘಟನೆ ಬೆಂಗಳೂರು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತಿ ದಿವಸ ಪತಿ ನೀಡುತ್ತಿರುವ ಹಿಂಸೆ, ಕಿರುಕುಳದಿಂದ ಬೇಸತ್ತ ಪತ್ನಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಅಲ್ಲದೆ ಪತಿ ಮತ್ತು ಕುಟುಂಬದವರ ವಿರುದ್ಧ ದೂರು ನೀಡಿದ್ದಾಳೆ.
ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವಿಶ್ವಾಸ್ ಈಗ ಪತ್ನಿ ವಿರುದ್ಧ ಅವಿಶ್ವಾಸ ತೋರುತ್ತಿದ್ದಾನೆ.
ನೀನು ನನ್ನ ಲವರ್ ರೀತಿ ಇಲ್ಲ. ಮದುವೆಗೆ ಮುನ್ನ ನಾನು ಯುವತಿಯೊಬ್ಬಳ್ಳನ್ನು ಪ್ರಿತಿ ಮಾಡುತ್ತಿದ್ದೆ. ಆದರೆ ಅವಳನ್ನು ಮದುವೆಯಾಗಲು ಮನೆಯವರ ಒಪ್ಪಿಗೆ ಸಿಗಲಿಲ್ಲ. ಕೊನೆಗೆ ಹಿರಿಯರ ಒತ್ತಾಯಕ್ಕೆ ನಾನು ನಿನ್ನನ್ನು ಮದುವೆಯಾದೆ. ಆದರೆ ನೀನು ನನಗೆ ಇಷ್ಟವಿಲ್ಲ. ಬೇಕಾದ್ರೆ ನಾನೇ ನಿಂತು ನಿನಗೆ ವರನೋಡಿ ವಿವಾಹ ಮಾಡಿಸುವುದಾಗಿ ಹೇಳುತ್ತಿದ್ದಾನೆ ಎಂದು ನೊಂದಿರುವ ಪತ್ನಿ ಪೊಲೀಸರಿಗೆ ತನ್ನ ಅಳಲು ತೋಡಿಕೊಂಡಿದ್ದಾಳೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು