ಬೆಂಗಳೂರಿನಲ್ಲಿ ಮೊಬೈಲ್, ಬೈಕ್ ಕದ್ದು ಹೈಟೆಕ್ ಆಗಿ ಮಾರಾಟ ಮಾಡುತ್ತಿದ್ದ ಕಿಲಾಡಿ ಕಳ್ಳರ ತಂಡವನ್ನು ಪೊಲೀಸರ ಬಂಧಿಸಿದ್ದಾರೆ.
ನಗರದಲ್ಲಿನ ಬೈಕ್ ಕೂಡಾ ಕಳ್ಳತನ ಮಾಡುತ್ತಿದ್ದ ಖದೀಮರು ಬೈಕ್ ಕದ್ದು ಅದರಲ್ಲಿನ ಜಿಪಿಎಸ್ ತೆಗೆದು ಮಾರುತ್ತಿದ್ದರಂತೆ. ನಾಲ್ಕೈದು ತಿಂಗಳಿನಿಂದ 17 ಕ್ಕೂ ಹೆಚ್ಚು ಪ್ರಕರಣಗಳು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ವಿಐಪಿ ಜನರ ಮೊಬೈಲ್ಗಳನ್ನೇ ಟಾರ್ಗೆಟ್ ಮಾಡ್ತಿದ್ದ ಈ ಚಾಲಾಕಿ ಕಳ್ಳರ ಗ್ಯಾಂಗ್, ಸ್ವತಃ ಸಚಿವ ಅಶ್ವಥ್ ನಾರಾಯಣ ಸಹೋದರನ ಮೊಬೈಲ್ನ್ನೇ ಕನ್ನ ಹಾಕಿದ್ದರಂತೆ. ಹೀಗೆ ವಿಐಪಿಗಳ ಮೊಬೈಲ್ಗಳಿಗೆ ಕನ್ನ ಹಾಕ್ತಿದ್ದ ಖದೀಮರು, ಕದ್ದ ಮೊಬೈಲ್ಗಳಿಗೆ ಅಮೇಜಾನ್ನಲ್ಲಿ ಕೊಂಡಿರುವುದಾಗಿ ಫೇಕ್ ಬಿಲ್ ರೆಡಿ ಮಾಡಿ ಅದನ್ನು OLX ನಲ್ಲಿ ಮಾರಾಟಕ್ಕಿಡುತ್ತಿದ್ದರಂತೆ.
ವಿಐಪಿ ಮೊಬೈಲ್ಗಳೇ ಕಳ್ಳತನವಾದ್ದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕೇವಲ ನಾಲ್ಕೆ ದಿನದಲ್ಲಿ ದೀಪಕ, ಆಕಾಶ್, ವಿಜಯ್, ಮತ್ತು ಮದನ್ಕುಮಾರ್ ಎಂಬ ಖದೀಮರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಮೊಬೈಲ್ಗಳು ಸೇರಿದಂತೆ 4 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ದರೋಡೆ ಮಾಡಿದ ಮಾಲನ್ನ, ಹೈಟೆಕ್ ಆಗಿ ಮಾರೋ ದಂಧೆ ಬೆಳಕಿಗೆ ಬಂದಿದೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು