December 24, 2024

Newsnap Kannada

The World at your finger tips!

crime,murder,women

ಬೆಂಗಳೂರಿನಲ್ಲಿ ‌ನಿಗೂಢ ಸ್ಪೋಟ : ವೃದ್ದ ದಂಪತಿಗೆ ಗಾಯ : ಐದು ಮನೆಗಳಿಗೆ ಹಾನಿ

Spread the love

ಮನೆಯೊಂದರಲ್ಲಿ ನಿಗೂಢ ಸ್ಪೋಟ ಸಂಭವಿಸಿ ವೃದ್ಧ ದಂಪತಿ ಗಾಯಗೊಂಡಿದ್ದಾರೆ. ಐದು ಮನೆಗಳು ಸಹ ಜಖಂ ಆಗಿವೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಕಳೆದ ರಾತ್ರಿ ಬೆಂಗಳೂರಿನಲ್ಲಿ ಜರುಗಿದೆ.

ವಿಜಯನಗರ ಬಡಾವಣೆಯ ಹಂಪಿನಗರದಲ್ಲಿ 2 ಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ರಾತ್ರಿ 1 ಗಂಟೆ ವೇಳೆಗೆ ನಿಗೂಢ ಸ್ಪೋಟ ಸಂಭವಿಸಿತು.

ಈ ಘಟನೆಯಲ್ಲಿ ವೃದ್ಧ ದಂಪತಿ ಸೂರ್ಯನಾರಾಯಣ ಶೆಟ್ಟಿ ಮತ್ತು ಪುಷ್ಪಾವತಮ್ಮ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮನೆಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿ ಸುಮಾರು 1 ಕಿ.ಮೀ ವರೆಗೂ ನಿಗೂಢ ಶಬ್ದ ಕೇಳಿಬಂದಿದೆ.

ಈ ವೇಳೆ ಸ್ಪೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಾಯಾಗಿವೆ. ಸ್ಪೋಟದ ರಭಸಕ್ಕೆ ಅಕ್ಕಪ್ಕದ ಮನೆ ಗಾಜುಗಳು ಪುಡಿಪುಡಿಯಾಗಿವೆ. 5 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

Copyright © All rights reserved Newsnap | Newsever by AF themes.
error: Content is protected !!