December 27, 2024

Newsnap Kannada

The World at your finger tips!

prakash raj

ನಟ ಪ್ರಕಾಶ್ ರಾಜ್ ಚಿತ್ರೀಕರಣ ವೇಳೆ ಗಾಯ – ಆಸ್ಪತ್ರೆಗೆ ದಾಖಲು

Spread the love

ಚಿತ್ರೀಕರಣದ ವೇಳೆಯಲ್ಲಿ ನಟ ಪ್ರಕಾಶ್ ರಾಜ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಟ ಪ್ರಕಾಶ್ ಚಿತ್ರೀಕರಣದ ವೇಳೆಯಲ್ಲಿ ಸಣ್ಣ ಗಾಯವಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಹೈದರಾಬಾದ್ ನ ಆಸ್ಪತ್ರೆಯಲ್ಲಿನ ನನ್ನ ಸ್ನೇಹಿತ ಡಾ.ಗುರುವರೆಡ್ಡಿ ಸರ್ಜರಿ ಮಾಡಿದ್ದಾರೆ. ಯಾವುದೇ ಪ್ರಾಣಾಪಾಯವಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಧನುಷ್ ಅವರ ಮುಂಬರುವ ಚಿತ್ರದಲ್ಲಿ ತಿರುಚ್ಚಿತ್ರಂಬಲಮ್ ಎಂಬ ಮಿತ್ರಾನ್ ಜವಾಹರ್ ಅವರೊಂದಿಗೆ ಪ್ರಮುಖ ಪಾತ್ರ ವಹಿಸಲು ಪ್ರಕಾಶ್ ರಾಜ್ ನಟಿಸಿದ್ದರು. ಈ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಂತ ವೇಳೆಯಲ್ಲಿ ಚೆನ್ನೈನಲ್ಲಿ ಅವರ ಕೈಗೆ ಗಂಭೀರವಾಗಿ ಗಾಯವಾಗಿರೋದಾಗಿ ತಿಳಿದು ಬಂದಿದೆ.

Copyright © All rights reserved Newsnap | Newsever by AF themes.
error: Content is protected !!