December 25, 2024

Newsnap Kannada

The World at your finger tips!

sidda

Pic Credits : deccanherald.com

ತತ್ವ ಸಿದ್ದಾಂತ ಇಲ್ಲದ ಜೆಡಿಎಸ್‌ ಉಳಿವಿಗಾಗಿ‌ ಏನು ಬೇಕಾದರೂ ಮಾಡುತ್ತಾರೆ – ಸಿದ್ದರಾಮಯ್ಯ ಕಿಡಿ

Spread the love

ಜೆಡಿಎಸ್ ನವರು ಉಳಿವಿಗಾಗಿ ಏನ್ ಬೇಕಾದರೂ ಮಾಡುತ್ತಾರೆ.
ಅವರಿಗೆ ಯಾವುದೇ ತತ್ವ, ಸಿದ್ದಾಂತವೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ಮದ್ದೂರಿನಲ್ಲಿ ಕಿಡಿ ಕಾರಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ನವರಿಗೆ ಕೆಲಸಗಳು ಆಗಬೇಕು. ಯಾಕೆಂದರೆ ಅವರ ಶಾಸಕರನ್ನು ಅವರ ಹತ್ತಿರ ಉಳಿಸಿಕೊಳ್ಳಬೇಕು ಎಂದರೆ
ಬಿಜೆಪಿ ಜೊತೆ ಚೆನ್ನಾಗಿ ಇರ್ತಾರೆ ಎಂದು ಕುಟುಕಿದರು.

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ:

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಮೊದಲೂ ಇತ್ತು. ಇವಗ್ಲೂ ಇದೆ, ಮುಂದೆನು ಇರತ್ತೆ. ಈ ಸರ್ಕಾರ ಬಹಳ ದಿನ ಇರತ್ತೆ ಅನಿಸುತ್ತಿಲ್ಲ.
ಸರ್ಕಾರ ಬೀಳಿಸುವ ಪ್ರಯತ್ನ ನಾವು ಮಾಡಲ್ಲ ಅವರಾಗಿ ಬಿದ್ದು ಹೋದರೆ ನಾವೇನು ಮಾಡೋಕೆ ಆಗತ್ತೆ ಎಂದು‌ ಪ್ರಶ್ನೆ ಮಾಡಿದರು.

ಜೆಡಿಎಸ್ ನವರು ಜಾತ್ಯತೀತ ತತ್ವದ ನಂಬಿಕೆ ಇಲ್ಲದವರು.
ಅವಕಾಶವಾದಿಗಳು ಯಾವಾಗ ಏನ್ ಬೇಕಾದ್ರು ಮಾಡಬಹುದು ಎಂದರು.

ಶಾಸಕ ಜಮೀರ್ ಮನೆ ಮೇಲಿನ ಈಡಿ ದಾಳಿ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನೇನು ಯಾರ ವಿರುದ್ಧವೂ ಫಿರ್ಯಾದಿ ಕೊಟ್ಟಿಲ್ಲ ಅಂತ ಅವನಾಗಿ ಅವನು ಹೇಳಿದ್ದಾನೆ. ಕುಂಬಳಕಾಯಿ ಕಳ್ಳ ದರೆ ಯಾಕ್ ಹೆಗಲು ಮುಟ್ಟಿ ನೋಡಿಕೊಳ್ಳಬೇಕಾ?
ಕುಮಾರಸ್ವಾಮಿ ದೂರು ಕೊಟ್ಟಿದ್ದಾರೆ ಅಂತ ನಾವು ಎಲ್ಲೂ ಹೇಳಿಲ್ಲ.
ಇದರ ಬಗ್ಗೆ ನನಗೆ ಗೊತ್ತಿಲ್ಲ. ಜಮೀರ್ ಕೂಡ ನನಗೆ ಸಿಕ್ಕಿಲ್ಲ.

ಬಿಜೆಪಿ ನಾಯಕರ ದೆಹಲಿ ಓಡಾಟ :

ಅವರಿಗೆ ಇದು ಹೊಸದಲ್ಲ. ಯಾರು ಯಡ್ಡಿಯೂರಪ್ಪ ವಿರುದ್ದ ಮಾತನಾಡ್ತಿದ್ದರು ಅವರಿಗೆ ಬಿಜೆಪಿ ಹೈಕಮಾಂಡ್ ಸಚಿವ ಸ್ಥಾನ ನೀಡಿಲ್ಲ.
ಯಡ್ಡಿಯೂರಪ್ಪ ಅವರ ಮಗನನ್ನು ಡೆಪ್ಯೂಟಿ ಚೀಪ್ ಮಿನಿಸ್ಟರ್ ಮಾಡಬೇಕಾಗತ್ತೆ ಅಂತಲೆ ಯಾರನ್ನು ಡೆಪ್ಯುಟಿ ಚೀಫ್ ಮಿನಿಸ್ಟರ್ ಮಾಡಿಲ್ಲ. ಆರ್ ಎಸ್ ಎಸ್ ನಿಂದ ಬಂದವರಿಗೆ ಪ್ರಮುಖವಾದ ಖಾತೆಗಳನ್ನು ನೀಡಿದ್ದಾರೆಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!