February 22, 2026

Newsnap Kannada

The World at your finger tips!

teacher, learning, school

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲಿ ಇಂಟರ್ ಶಿಪ್

Spread the love

2020-21 ರ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಗೂ ಸಹ ಮನೆಯಿಂದಲೇ ಇಂಟರ್ ಶಿಪ್ ಮಾಡುವ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕಲ್ಪಿಸಿದೆ.

ಕೊರೊನಾ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ವಿವಿಯ ಕುಲಸಚಿವ ಡಾ. ಕರಿಸಿದ್ದಪ್ಪ ಹೇಳಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಉದ್ಯೋಗದಾತ ಸಂಸ್ಥೆಗಳು ವರ್ಕ್ ಫ್ರಮ್ ಹೋಂ ಅಥವಾ ಡಿಜಿಟಲ್ ವೇದಿಕೆಗೆ ಅನುಗುಣವಾಗಿ ಇಂಟರ್ ನಿಯಾಗಿ ತೊಡಗಿಸಿಕೊಳ್ಳಬಹುದಾಗಿದೆ. ಇಂಟರ್ ಶಿಪ್ ಗೆ ನಿಗದಿಪಡಿಸಿದ್ದಂತ ಕಾಲಾವಕಾಶವನ್ನು ಕಡಿಮೆ ಮಾಡಲಾಗಿದೆ ಎಂದಿದ್ದಾರೆ.

error: Content is protected !!