February 22, 2026

Newsnap Kannada

The World at your finger tips!

nia iseral

ಭಟ್ಕಳ್ ನಲ್ಲಿ ಐಸಿಸ್‌ ಉಗ್ರನನ್ನು ಬಂಧಿಸಿದ ಎನ್ಐಎ

Spread the love

ಪೈಶಾಚಿಕ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್‌ (ಐಸಿಸ್‌) ನೇಮಕಾತಿ ಜಾಲದ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಕಾರ್ಯಾಚರಣೆ ಮಾಡಿ ಭಟ್ಕಳ ಮೂಲದ ಶಂಕಿತ ಉಗ್ರನನ್ನು ಬಂಧಿಸಿದೆ.

ಪಾಕಿಸ್ತಾನ-ಆಫ್ಘಾನಿಸ್ತಾನದ ಐಸಿಸ್‌ ಕಮಾಂಡರ್‌ಗಳ ಜತೆ ನೇರ ಸಂಪರ್ಕ ಹೊಂದಿದ್ದ ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಜಫ್ರಿ ಜವ್ಹಾರ್‌ ದಾಮುದಿ ಅಲಿಯಾಸ್‌ ಅಬು ಹಝೀರ್‌ ಅಲ್‌ ಬದ್ರಿ ಬಂಧಿತ ಉಗ್ರ.

ಬಂಧಿತನಿಂದ ಮೊಬೈಲ್‌ಗಳು, ಹಾರ್ಡ್‌ ಡಿಸ್ಕ್‌ಗಳು, ಎಸ್‌ಡಿ ಕಾರ್ಡ್‌ಗಳು ಹಾಗೂ ಡಿವಿಡಿ ಸೇರಿದಂತೆ ತಾಂತ್ರಿಕ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಐಸಿಸ್‌ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಈತನ ಸೋದರ ಅದ್ನಾ ಹಸನ್‌ ದಾಮುದಿ ಎಂಬಾತನನ್ನು ಸಹ ಬಂಧಿಸಲಾಗಿತ್ತು.

error: Content is protected !!