February 22, 2026

Newsnap Kannada

The World at your finger tips!

jameer

ಶಾಸಕ ಜಮೀರ್‌ ನಿವಾಸ , ಕಚೇರಿಗಳಲ್ಲಿ ಸತತ 23 ಗಂಟೆಗಳ ಕಾಲ ನಡೆದ ಇಡಿ ದಾಳಿ ಅಂತ್ಯ

Spread the love

ಕಾಂಗ್ರೆಸ್ ಶಾಸಕ ಜಮೀರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ಶುಕ್ರವಾರ ಬೆಳಿಗ್ಗೆ ಅಂತ್ಯವಾಗಿದೆ.

ಸತತ 23 ಗಂಟೆಗಳ ಕಾಲದ ನಡೆದ ಇಡಿ ದಾಳಿ ನಂತರ ಅಧಿಕಾರಿಗಳು ಜಮೀರ್ ಬಂಗಲೆಯಿಂದ ತೆರಳಿದ್ದಾರೆ.

ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆ 5 ಗಂಟೆವರೆಗೂ ನಡೆದ ದಾಳಿ ನಡೆಸಿದ್ದಾರೆ. ಈ ವೇಳೆ ಸಿಕ್ಕ ಹಲವು ದಾಖಲೆಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.

ಜಮೀರ್ ಅಹ್ಮದ್ ಖಾನ್ ಐಎಂಎ ಗೋಲ್ಡ್‍ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿರುವ ಮಾಹಿತಿ ಸಿಕ್ಕಿದೆ. ಮಗಳ ಮದುವೆಯ ಸಂದರ್ಭದಲ್ಲಿ ಜಮೀರ್ ಮನ್ಸೂರ್ ಬಳಿ 9 ಕೋಟಿ ಹಣ ಪಡೆದಿದ್ದಾರೆ. ಉಳಿದಿದ್ದ ಹಣವನ್ನು ಚಿನ್ನದ ರೂಪದಲ್ಲಿ ಪಡೆದುಕೊಂಡಿದ್ದರು. ಐಎಂಎ ಗೋಲ್ಡ್ ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಜಮೀರ್, ಬಡ್ಡಿಯ ರೂಪದಲ್ಲಿಯೂ ಕೂಡ ಹಣ ಪಡೆದುಕೊಂಡಿದ್ದಾರೆಂಬ ಮಾಹಿತಿ ಇದೆ.

error: Content is protected !!